ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ

Prasthutha|

ಉಕ್ರೇನ್: ಉಭಯ ದೇಶದಲ್ಲಿ ಹೆಚ್ಚುತ್ತಿರುವ ಹಗೆತನದಿಂದಾಗಿ ಉಕ್ರೇನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ತಕ್ಷಣ ದೇಶ ತೊರೆಯುವಂತೆ ರಾಯಭಾರಿ ಕಚೇರಿ ತನ್ನ ಹೊಸ ಆದೇಶದಲ್ಲಿ ಸೂಚಿಸಿದೆ.

- Advertisement -

ಉಕ್ರೇನ್’ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಳಿಕ ಇದೇ ರೀತಿಯ ಸಲಹೆಯನ್ನು ನೀಡಿದ ಒಂದು ವಾರದ ಗಡುವಿನಲ್ಲಿ ಇದೀಗ ರಾಯಭಾರಿ ಕಚೇರಿಯಿಂದ ಹೊಸ ಆದೇಶ ಬಂದಿದೆ.

ಅಕ್ಟೋಬರ್ 19ರಂದು ರಾಯಭಾರಿ ಕಚೇರಿ ನೀಡಿದ ಸಲಹೆಯ ಮುಂದುವರಿದ ಭಾಗವಾಗಿ, ಇದೀಗ ಉಕ್ರೇನ್’ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.

- Advertisement -

ಹಿಂದಿನ ಸಲಹೆಯ ಆಧಾರದಲ್ಲಿ ಕೆಲವು ಭಾರತೀಯರು ಈಗಾಗಲೇ ಉಕ್ರೇನ್ ತೊರೆದಿದ್ದರು ಎಂದು ಅದು ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೆ ದೇಶದಿಂದ ನಿರ್ಗಮಿಸಲು ಉಕ್ರೇನ್ ಗಡಿಗೆ ಪ್ರಯಾಣಿಸಲು ಯಾವುದೇ ಮಾರ್ಗದರ್ಶನ ಅಥವಾ ಸಹಾಯಕ್ಕಾಗಿ ಭಾರತೀಯ ಪ್ರಜೆಗಳನ್ನು ಸಂಪರ್ಕಿಸುವಂತೆ ರಾಯಭಾರಿ ಕಚೇರಿ ಮನವಿ ಮಾಡಿವೆ.

ಸುಮಾರು ಮೂರು ವಾರಗಳ ಹಿಂದೆ ಕ್ರೈಮಿಯಾದಲ್ಲಿ ನಡೆದ ಬೃಹತ್ ಸ್ಫೋಟಕ್ಕೆ ಬದಲಾಗಿ ರಷ್ಯಾವು ಉಕ್ರೇನ್ ನಗರಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿಗಳನ್ನು ನಡೆಸುವ ಪ್ರತಿಕಾರ ತೀರಿಸಿದ್ದು, ಇದು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು.



Join Whatsapp