ವಾಷಿಂಗ್ಟನ್: 3.36 ಲಕ್ಷ ಕೋಟಿಗಗೆ ಟ್ವಿಟ್ಟರ್ ಅನ್ನು ಖರೀದಿಸಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ 2017ರಲ್ಲಿ ಟ್ವಿಟ್ಟರ್ ಕುರಿತು ಮಾಡಿದ್ದ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ.
2017 ರಲ್ಲಿ ಎಲಾನ್ ಮಸ್ಕ್ ‘ಐ ಲವ್ ಟ್ವಿಟರ್’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಬಿಸಿನೆಸ್ ಇನ್ಸೈಡರ್ ಸಂಪಾದಕ ಡೇವ್ ಸ್ಮಿತ್ ಅವರು ‘ಹಾಗಾದರೆ ನೀವಿದನ್ನು ಖರೀದಿಸಿ’ ಎಂದು ಪ್ರತಿಕ್ರಿಯೆ ನೀಡಿದ್ದರು. ಪ್ರತಯಾಗಿ ಟ್ವೀಟ್ ಮಾಡಿದ್ದ ಎಲಾನ್ ಮಸ್ಕ್ ‘ಇದಕ್ಕೆ ಎಷ್ಟು’ ಎಂದು ಕೇಳಿದ್ದರು. ಇದೀಗ 2022ರಲ್ಲಿ ಟ್ವಿಟರ್ ಖರೀದಿಸಿರುವ ಎಲಾನ್ ಬಗ್ಗೆ ಡೇವ್ ಸ್ಮಿತ್ 2017ರಲ್ಲಿ ಮಾಡಿದ್ದ ಟ್ವೀಟ್ ಅನ್ನು ಉಲ್ಲೇಖಿಸಿ ಈ ಮಾತು ನನ್ನನ್ನು ಈಗಲೂ ಕಾಡುತ್ತಿವೆ ಎಂದು ಬರೆದಿದ್ದಾರೆ.
ಎಲಾನ್ ಮಸ್ಕ್ ಅವರು ಟ್ವಿಟ್ಟರ್ ನಲ್ಲಿ ಶೇ.9.2ರಷ್ಟು ಷೇರು ಹೊಂದಿದ್ದರು. ನಂತರ ಪ್ರತಿ ಷೇರಿಗೆ 54.20 ಡಾಲರ್ (4,149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಮಸ್ಕ್ ಖರೀದಿ ಪ್ರಸ್ತಾಪಕ್ಕೆ ಟ್ವಿಟ್ಟರ್ ಆಡಳಿತ ಮಂಡಳಿ ಒಪ್ಪಿದೆ. ಟ್ವಿಟರ್ ಖರೀದಿಯನ್ನು ‘Yessss’ ಎಂದು ಬರೆದು ಎಲಾನ್ ಮಸ್ಕ್ ಸಂಭ್ರಮಿಸಿದ್ದಾರೆ.