ನಾನಿನ್ನು ಗಂಡಲ್ಲ, ಹೆಣ್ಣು: ಜನ್ಮ ಪ್ರಮಾಣ ಪತ್ರ ಬದಲಾವಣೆ ಕೋರಿ ಕೋರ್ಟ್ ಮೆಟ್ಟಿಲೇರಿದ ಎಲನ್ ಮಸ್ಕ್ ಪುತ್ರ

Prasthutha|

ವಾಷಿಂಗ್ಟನ್: ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಸಂಸ್ಥೆಯ ಸ್ಥಾಪಕ ಎಲನ್ ಮಸ್ಕ್ ಪುತ್ರ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತನ್ನ ಜನ್ಮ ಪ್ರಮಾಣ ಪತ್ರ ಬದಲಾವಣೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗಾಗಲೇ ಲಿಂಗ ಬದಲಾವಣೆಗೊಳಿಸಿರುವ ಎಲನ್ ಪುತ್ರ ಅಲೆಂಗ್ಸಾಂಡರ್, ತಾನು ಇನ್ನು ಮುಂದೆ ಗಂಡಲ್ಲ, ಹೆಣ್ಣು ಎಂದು ಹೇಳಿದ್ದಾರೆ.

- Advertisement -

ಅಲ್ಲದೇ, ಅಲೆಕ್ಸಾಂಡರ್‌ ಮಸ್ಕ್ ತನ್ನ ಹೆಸರು ಬದಲಾವಣೆ ಕೋರಿಯೂ ಲಾಸ್ ಏಂಜಲೀಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ನಾನು ನನ್ನ ತಂದೆಯೊಂದಿಗೆ ಬದುಕುತ್ತಿಲ್ಲ, ಅವರೊಂದಿಗೆ ಸಂಬಂಧವೂ ನನಗೆ ಬೇಕಿಲ್ಲ ಎಂದು ತಿಳಿಸಿದ್ದಾರೆ. ಅಲೆಕ್ಸಾಂಡರ್ ತನ್ನ ಹೆಸರು ಮತ್ತು ಜನ್ಮ ಪ್ರಮಾಣ ಪತ್ರವನ್ನು ಬದಲಾವಣೆ ಮಾಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕ್ಸೇವಿಯರ್‌ ಮಸ್ಕ್, ಎಲಾನ್‌ ಮಸ್ಕ್ ಮತ್ತು ಅವರ ಮಾಜಿ ಪತ್ನಿ ಜಸ್ಟೀನ್‌ ಮಸ್ಕ್ ಅವರ ಪುತ್ರನಾಗಿದ್ದು, ಪತ್ನಿ ಜಸ್ಟೀನ್‌ 2008ರಲ್ಲಿ ವಿಚ್ಛೇದನ ಪಡೆದಿದ್ದಾರೆ.



Join Whatsapp