ವಾಷಿಂಗ್ಟನ್: ಎಲೋನ್ ಮಸ್ಕ್ ಶುಕ್ರವಾರ ಟ್ವಿಟರ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರ್ವಾಲ್ ಸೇರಿದಂತೆ ಕನಿಷ್ಠ ನಾಲ್ಕು ಉನ್ನತ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿದರು ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.
ಸಾಮಾಜಿಕ ಮಾಧ್ಯಮ ಸಂಸ್ಥೆಯನ್ನು ಖರೀದಿಸಲು ಒಪ್ಪಂದವನ್ನು ಮುದ್ರೆಯೊತ್ತುವ ಗಡುವಿನ ಕೆಲವು ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದ್ದು, ಟ್ವಿಟರ್ ಖರೀದಿಸಲು ಮಸ್ಕ್ 44 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದವನ್ನು ಗುರುವಾರ ಮುಕ್ತಾಯಗೊಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಎಲೋನ್ ಮಸ್ಕ್ ಟ್ವಿಟರ್ ಖರೀದಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಒಪ್ಪಂದದ ಷರತ್ತುಗಳನ್ನು ಪಾಲಿಸಲು ನ್ಯಾಯಾಲಯಕ್ಕೆ ಮೊರೆ ಹೊದ ಕಾರ್ಯನಿರ್ವಾಹಕ ಪರಾಗ್ ಅಗರವಾಲ್ ಅವರನ್ನು ಅವರು ವಜಾಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಾನೂನು, ನೀತಿ ಮತ್ತು ಟ್ರಸ್ಟ್ ನ ಮುಖ್ಯಸ್ಥರಾದ ವಿಜಯಾ ಗಡ್ಡೆ ಕೂಡ ನಿರ್ಗಮಿಸಿದ್ದಾರೆ.
ನವೆಂಬರ್ ನಲ್ಲಿ ಸಹ-ಸಂಸ್ಥಾಪಕ ಜ್ಯಾಕ್ ಡೋರ್ಸೆ ಅನಿರೀಕ್ಷಿತವಾಗಿ ಕಂಪನಿಗೆ ರಾಜೀನಾಮೆ ನೀಡಿದಾಗ ಅಗರ್ವಾಲ್ ಸಿಇಒ ಹುದ್ದೆಗೆ ಕಾಲಿಟ್ಟರು. ಅಗರ್ವಾಲ್ ಅವರು ಸುಮಾರು ಒಂದು ದಶಕದಿಂದ ಟ್ವಿಟ್ಟರ್ನಲ್ಲಿದ್ದರು, ಇತ್ತೀಚೆಗೆ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಮುಖ್ಯ ಷೇರುದಾರನಾಗಿ ಮಸ್ಕ್ ಅವರ ಆಗಮನದ ಬಳಿಕ ಸಿಇಒ ಆಗಿ ಅವರ ಅಧಿಕಾರಕ್ಕೆ ಹಲವು ಕಾರ್ಯಗಳು ಅಡ್ಡಿಪಡಿಸಿತ್ತು.