ಜಗತ್ತಿನ ಹಸಿವು ನೀಗುವುದಿದ್ದರೆ ಶೇ. 2ರಷ್ಟು ಸಂಪತ್ತು ನೀಡಲು ಸಿದ್ಧ ಎಂದ ಎಲಾನ್ ಮಸ್ಕ್..!

Prasthutha|

ಕ್ಯಾಲಿಫೋರ್ನಿಯಾ: ತನ್ನ ಸಂಪತ್ತಿನ ಶೇ.2ರಷ್ಟು ಹಣದಿಂದ ಜಗತ್ತಿನ ಹಸಿವು ನೀಗಬಲ್ಲುದಾದರೆ ತನ್ನ ಮಾಲೀಕತ್ವದ ಟೆಸ್ಲಾ ಕಂಪನಿಯ ಷೇರುಗಳನ್ನು ಮಾರಾಟ ಮಾಡಿ ಆ ಮೊತ್ತವನ್ನು ನೀಡಲು ನಾನು ಈಗಲೇ ಸಿದ್ಧನಿದ್ದೇನೆ ಎಂದು ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

- Advertisement -

ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ –WFPಯ ನಿರ್ದೇಶಕ ಡೇವಿಡ್ ಬೆಸ್ಲಿ ಹೇಳಿಕೆಯ ಬೆನ್ನಲ್ಲೆ ಎಲಾನ್ ಮಸ್ಕ್ WFP ನಿರ್ದೇಶಕನಿಗೆ ಟ್ವಿಟರ್’ನಲ್ಲಿ ಸವಾಲು ಹಾಕಿದ್ದಾರೆ. CNNಗೆ ನೀಡಿದ್ದ ಸಂದರ್ಶನದಲ್ಲಿ ಬೆಸ್ಲಿ, ಎಲಾನ್ ಮಸ್ಕ್ ಸಂಪತ್ತಿನ ಶೇ.ರಷ್ಟು ಹಣದಿಂದ ಜಗತ್ತಿನ ಹಸಿವನ್ನು ನೀಗಿಸಲು ಸಾಧ್ಯ ಎಂದು ಹೇಳಿಕೆ ಕೊಟ್ಟಿದ್ದರು.

ಈ ಸಂದರ್ಶನದ ಬೆನ್ನಲ್ಲೇ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ‘ 6 ಬಿಲಿಯನ್ ಡಾಲರ್ ಹಣದಿಂದ ಜಾಗತಿಕ ಹಸಿವಿನ ಸಮಸ್ಯೆಯನ್ನು ಯಾವ ರೀತಿಯಲ್ಲಿ ನಿರ್ಮೂಲನೆ ಮಾಡುತ್ತೀರಿ ಎಂದು ಇಲ್ಲಿ ವಿವರಿಸಿದರೆ, ನಾನು ಈ ಕೂಡಲೇ ಟೆಸ್ಲಾ ಕಂಪನಿಯ ಷೇರುಗಳನ್ನು ಮಾರಾಟ ಮಾಡಿ ಆ ಮೊತ್ತವನ್ನು ನೀಡಲು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದ್ದಾರೆ.

- Advertisement -

ಡೀಪ್ ಇನ್ಸ್ಟಿಕ್ಟ್ ಕಂಪನಿಯ ಸಹ ಸಂಸ್ಥಾಪಕ ಡಾ. ಎಲಿ ಡೇವಿಡ್ ಟ್ವೀಟ್’ಗೆ ಸಹಮತ ಸೂಚಿಸಿ ಮಸ್ಕ್  ಮಾಡಿರುವ ಟ್ವೀಟ್ ಇದೀಗ ಎಲ್ಲರ ಗಮನ ಸೆಳೆದಿದೆ. CNN ವೆಬ್;ಸೈಟ್’ನಲ್ಲಿ ಬಂದ ಸಂದಶರ್ನದ ಸ್ಕ್ರೀನ್ ಶಾಟ್ ಹಾಕಿ ಟ್ವೀಟ್ ಮಾಡಿದ್ದ ಡಾ. ಡೇವಿಡ್, ಫ್ಯಾಕ್ಟ್ ಚೆಕ್- 6 ಬಿಲಿಯನ್ ಡಾಲರ್ ಎಲಾನ್ ಮಸ್ಕ್ ಸಂಪತ್ತಿನ ಶೇ 2.ರಷ್ಟು ಹಣ. ಆದರೆ  UN ನ ವಿಶ್ವ ಆಹಾರ ಕಾರ್ಯಕ್ರಮ-WFPಯು 2020ರಲ್ಲಿ 8.4 ಬಿಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸಿದೆ. ಆ ಮೊತ್ತದಲ್ಲಿ ವಿಶ್ವದ ಹಸಿವು ನಿವಾರಣೆ ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಎಲಾನ್ ಮಸ್ಕ್ ಸರಣಿ ಟ್ವೀಟ್’ಗಳನ್ನ ಮಾಡಿದ್ದಾರೆ. ನಾನು ಹಣವನ್ನು ನೀಡಲು ಸಿದ್ಧನಿದ್ದೇನೆ. ಆದರೆ ಇದರ ಎಲ್ಲಾ ಲೆಕ್ಕಾಚಾರಗಳು ಎಲ್ಲರಿಗೂ ಸಿಗುವಂತಿರಬೇಕು. ನನ್ನ ಹಣವು ಯಾವ ರೀತಿಯಲ್ಲಿ ಉಪಯೋಗಿಸಲ್ಪಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಪ್ರತಿಕ್ರಿಯಿಸಿರುವ, WFPಯ ನಿರ್ದೇಶಕ ಡೇವಿಡ್ ಬೆಸ್ಲಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಲಾಗಿದೆ. ‘ 6 ಬಿಲಿಯನ್ ಡಾಲರ್ ಹಣದಿಂದ ಜಾಗತಿಕ ಹಸಿವಿನ ಸಮಸ್ಯೆಯನ್ನು ನಿರ್ಮೂಲನೆ ಮಾಡಬಹುದು ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ಇಷ್ಟು ಮೊತ್ತ ಹಣ ಏಕಕಾಲದಲ್ಲಿ ದೊರೆತರೆ ಜಗತ್ತಿನಲ್ಲಿ ಹಸಿವಿನಿಂದ ಸಾಯುತ್ತಿರುವ  42 ಮಿಲಿಯನ್ ಜನರ ಜೀವವನ್ನು ಉಳಿಸಬಹುದು. ಎಂದು ಹೇಳಿದ್ದಾರೆ.

ಇದಾದ ಬಳಿಕವೂ ಟ್ವಿಟರ್’ನಲ್ಲಿ ಇವರಿಬ್ಬರ ಸವಾಲು ಪ್ರತಿ ಸವಾಲು ಮುಂದುವರಿದಿದೆ. ನೀವು ವ್ಯಯಿಸುತ್ತಿರುವ ಹಣದ ಲೆಕ್ಕಾಚಾರವನ್ನು ಸಾರ್ವಜನಿಕೆ ಮುಂದೆ ಇಡಿ. ಹೀಗಾದಾಗ ಸಂಗ್ರಹವಾಗುವ ಹಣವು ಎಲ್ಲಿ ಹೋಗುತ್ತದೆ ಎಂದು ಜನಸಾಮಾನ್ಯರಿಗೆ ತಿಳಿಯುತ್ತದೆ ಎಂದು ಮಸ್ಕ್, WFPಯ ನಿರ್ದೇಶಕ ಡೇವಿಡ್ ಬೆಸ್ಲಿಗೆ ಟಾಂಗ್ ಕೊಟ್ಟಿದ್ದಾರೆ.



Join Whatsapp