ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್

Prasthutha|

ನವದೆಹಲಿ: ಟೆಸ್ಲಾ, ಸ್ಟಾರ್‌ಲಿಂಕ್ ಮತ್ತು X ಮಾಲೀಕ ಎಲಾನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡಿದ್ದಾರೆ. ಟೆಸ್ಲಾ ಷೇರುಗಳಲ್ಲಿ ಭಾರಿ ಕುಸಿದ ಬಳಿಕ ಅವರ ಸಂಪತ್ತಿನಲ್ಲಿ ದೊಡ್ಡ ಇಳಿಕೆ ಕಂಡುಬಂದಿದೆ. ಈ ಬೆಳವಣಿಗೆಯ ನಂತರ ಫ್ರೆಂಚ್ ಉದ್ಯಮಿ ಮತ್ತು ಐಷಾರಾಮಿ ಬ್ರ್ಯಾಂಡ್ ಲೂಯಿ ವಿಟಾನ್ ಮಾಲೀಕ ಬರ್ನಾರ್ಡ್ ಅರ್ನಾಲ್ಟ್ ಈಗ ಮತ್ತೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

- Advertisement -

ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ ಪ್ರಕಾರ, ಬರ್ನಾರ್ಡ್ ಅರ್ನಾಲ್ಟ್ ಅವರ ನಿವ್ವಳ ಮೌಲ್ಯವು ಸುಮಾರು $207.6 ಬಿಲಿಯನ್ ತಲುಪಿದೆ. ಎಲೋನ್ ಮಸ್ಕ್ ಅವರ ಒಟ್ಟು ಸಂಪತ್ತು ಈಗ $204.7 ಬಿಲಿಯನ್ ಆಗಿದೆ.

ಟಾಪ್ 10 ಶ್ರೀಮಂತ ಪಟ್ಟಿ ಹೀಗಿದೆ
ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಬರ್ನಾರ್ಡ್ ಅರ್ನಾಲ್ಟ್ ಮತ್ತು ಎಲಾನ್​​​​​ ಮಸ್ಕ್ ಒಂದು ಮತ್ತು ಎರಡನೇ ಸ್ಥಾನದಲ್ಲಿದ್ದರೆ, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಹೆಸರು ಮೂರನೇ ಸ್ಥಾನದಲ್ಲಿದೆ. ಅವರ ನಿವ್ವಳ ಮೌಲ್ಯ 181.30 ಬಿಲಿಯನ್ ಡಾಲರ್. ಲ್ಯಾರಿ ಎಲಿಸನ್ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ಅವರ ನಿವ್ವಳ ಮೌಲ್ಯ 142.20 ಬಿಲಿಯನ್ ಡಾಲರ್. $139.1 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇದಾದ ನಂತರ ವಾರೆನ್ ಬಫೆಟ್, ಲ್ಯಾರಿ ಪೇಜ್, ಬಿಲ್ ಗೇಟ್ಸ್, ಸೆರ್ಗೆ ಬ್ರಿನ್ ಮತ್ತು ಸ್ಟೀವ್ ಬಾಲ್ಮರ್ ಅವರ ಹೆಸರೂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸೇರಿದೆ.

- Advertisement -

ಅಂಬಾನಿ ಮತ್ತು ಅದಾನಿ ಎಷ್ಟನೇ ಸ್ಥಾನ?
ಏಷ್ಯಾ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಹೆಸರು ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದೆ. ಅವರ ನಿವ್ವಳ ಮೌಲ್ಯ 104.4 ಬಿಲಿಯನ್ ಡಾಲರ್. ಈ ಪಟ್ಟಿಯಲ್ಲಿ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ 16 ನೇ ಸ್ಥಾನದಲ್ಲಿದ್ದಾರೆ. ಅವರು ಒಟ್ಟು $75.7 ಬಿಲಿಯನ್ ಹೊಂದಿದ್ದಾರೆ.


Join Whatsapp