ಆನೆಗಳ ದಾಂಧಲೆ; ಸಂಕಷ್ಟದಿಂದ ನಲುಗಿದ ಮಲೆನಾಡ ರೈತರು

Prasthutha|

ಚಿಕ್ಕಮಗಳೂರು: ಆನೆಗಳು ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನು ನಾಶ ಮಾಡಿ ರೈತರನ್ನು ತೀವ್ರ ಆತಂಕಕ್ಕೀಡುಮಾಡಿದ ಘಟನೆ ಕಳಸ ತಾಲೂಕಿನ ಸಂಜೀವಮೆಟ್ಟಲು ಸಮೀಪದ ಗೊಡ್ಲುಮನೆ ಪ್ರದೇಶದಲ್ಲಿ ನಡೆದಿದೆ.

- Advertisement -


ಭಾನುವಾರ ರಾತ್ರಿ ಕಾಡಾನೆಗಳು ಕಾಫಿ, ಅಡಿಕೆ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿ ಕೃಷಿಕ ಗೋಪಾಲ ಗೌಡ, ಮಲ್ಲೇಗೌಡ ಅವರ ತೋಟ ಮತ್ತು ಆಸುಪಾಸಿನ ತೋಟಗಳಲ್ಲಿ ರಾತ್ರಿಯಿಡೀ ರಾಜಾರೋಷವಾಗಿ ತಿರುಗಾಡಿ ಅಡಿಕೆ, ಬಾಳೆಗಿಡಗಳನ್ನು ಮುರಿದು ನಾಶಗೊಳಿಸಿದೆ.


ತಮ್ಮ ದಾರಿಗೆ ಅಡ್ಡ ಸಿಕ್ಕ ಬೇಲಿಯನ್ನು ಕೂಡ ಆನೆಗಳು ಧ್ವಂಸಗೈದಿದ್ದು, ಕಳೆದ 2 ದಿನಗಳಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕೇಶಿಯಾ ಪ್ಲಾಂಟೇಶನ್ ಒಳಗೆ ಆಶ್ರಯ ಪಡೆದಿದ್ದ ಆನೆಗಳು ಭಾನುವಾರ ರಾತ್ರಿ ತೋಟಗಳಿಗೆ ನುಗ್ಗಿ ಭಾರೀ ಪ್ರಮಾಣದ ನಷ್ಟವನ್ನುಂಟುಮಾಡಿದೆ.

- Advertisement -


ಒಂದೆಡೆ ಸಂಪೂರ್ಣವಾಗಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಇನ್ನೊಂದೆಡೆ ಆನೆದಾಳಿಯಿಂದಾಗಿ ಭಾರೀ ಪ್ರಮಾಣದ ಬೆಳೆಹಾನಿ ಉಂಟಾಗುತ್ತಿದ್ದು ಮಲೆನಾಡಿನ ರೈತರು ಸಂಕಷ್ಟದಿಂದ ನಲುಗಿದ್ದಾರೆ.



Join Whatsapp