ಎಲೆಕ್ಟ್ರೋ ಬಾಂಡ್ ಸರದಾರ ರಾಜ್ಯಕ್ಕೆ ಬಂದು ಸುಳ್ಳು ಹರಿಬಿಟ್ಟಿದ್ದಾರೆ: ಕೃಷ್ಣಬೈರೇಗೌಡ

Prasthutha|

ಬೆಂಗಳೂರು: ಎಲೆಕ್ಟ್ರೋ ಬಾಂಡ್ ಸರದಾರ ರಾಜ್ಯಕ್ಕೆ ಬಂದು ಸುಳ್ಳು ಹರಿಬಿಟ್ಟಿದ್ದಾರೆ ‘ಬರ’ದ ವರದಿ ಮೂರು ತಿಂಗಳು ವಿಳಂಬ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅಂತ ಹೇಳಿದ್ದಾರೆ. ಸುಳ್ಳುಗಳ ಸರದಾರ ಅಮಿತ್ ಶಾ ಸೂರ್ಯನಿಗೆ ಟಾರ್ಚ್ ಹಿಡಿಯುವ ಕೆಲಸ ಮಾಡಿದ್ದಾರೆ ಎಂದರು.

ಬರಗಾಲದ ಕೈಪಿಡಿ ಪ್ರಕಾರ ಅಕ್ಟೋಬರ್ 21 ರವರೆಗೆ ಮುಂಗಾರು ಹಂಗಾಮಿಗೆ ಕಾಯಬೇಕು. ಆದರೆ ನಾವು ಮೊದಲೇ ಅರ್ಜಿ‌ ಸಲ್ಲಿಸಿದ್ದೆವು. ಅಕ್ಟೋಬರ್ ಗೆ ಮೊದಲೇ ಬರ ಘೋಷಿಸಿದ್ದೆವು. ಅಂದರೆ ಒಂದೂವರೆ ತಿಂಗಳ ಮೊದಲೇ ಘೋಷಿಸಿದ್ದೆವು. ಸೆಪ್ಟಂಬರ್ 22 ರಂದು ಕೇಂದ್ರಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದೆವು. ಸೆಪ್ಟಂಬರ್ 27 ರಂದು ಪತ್ರಕ್ಕೆ ಉತ್ತರ ಬಂದಿದೆ. 41 ಲಕ್ಷ 56 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಈ ಬಗ್ಗೆ ನಮಗೆ ಪರಿಹಾರದ ಮನವಿ ಬಂದಿದೆ. ನಾವು ಕೇಂದ್ರ ತಂಡವನ್ನ ಕಳಿಸ್ತಿದ್ದೇವೆ. ಹೀಗೆಂದು ಕೇಂದ್ರ ಕೃಷಿ ಇಲಾಖೆ ಸ್ಪಷ್ಟಪಡಿಸಿದೆ. ನವೆಂಬರ್ 8 ರಂದು ಕೃಷಿ ಇಲಾಖೆ ಆದೇಶ ಹೊರಡಿಸಿದೆ. ಬಳಿಕ ನ.12 ರಂದು ಸಭೆ ನಡೆಸುವುದಾಗಿ ತಿಳಿಸಿತ್ತು. ಸಭೆಯ ಸೂಚನಾ ಪತ್ರವು ನಮಗೆ ಸಿಕ್ಕಿದೆ. ನವೆಂಬರ್ 26 ರಂದು ಮತ್ತೊಂದು ಪತ್ರ ಬಂದಿದೆ. ಕೇಂದ್ರ ಗೃಹ ಇಲಾಖೆಗೆ ಬರೆದ ಪತ್ರ ಅದು. ಎನ್ ಡಿಆರ್ ಎಫ್ ನೆರವು ಕೋರಿ ಪತ್ರ ಬರೆದಿದೆ. ಇದರ ಬಗ್ಗೆ ಕೇಂದ್ರ ಕೃಷಿ ಇಲಾಖೆಯೇ ಸ್ಪಷ್ಟಪಡಿಸಿದೆ. ಅದರ ದಾಖಲೆಗಳು ನಮ್ಮಲ್ಲಿವೆ ಎಂದು ಅಂಕಿ ಸಂಖ್ಯೆ ಸಮೇತ ಮಾಹಿತಿ ನೀಡಿದ ಸಚಿವರು, ಆದರೆ ಸತ್ಯ ಘಟನೆಗಳೇನೆಂಬುದು ಮುಚ್ಚಿಟ್ಟು ಇಲ್ಲಿ ಅಮಿತ್ ಶಾ ಸುಳ್ಳು ಹೇಳಿದ್ದಾರೆ. ಬರಪರಿಹಾರದ ಲೆಟರ್ ನವೆಂಬರ್ 26 ರಂದೇ ಗೃಹ ಸಚಿವರ ಟೇಬಲ್ ಗೆ ಹೋಗಿದೆ. ನಾಲ್ಕು ತಿಂಗಳು ಟೇಬಲ್ ಮೇಲೆ ಧೂಳು ತಿಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ನಾವು ನಿಮ್ಮನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಡಿಸೆಂಬರ್ 23 ರಂದು ಉನ್ನತ ಮಟ್ಟದ ಸಭೆ ಮಾಡ್ತೇವೆ ಅಂದಿದ್ರಿ. ನೀವು ಮಾತುಕೊಟ್ಟಿದ್ರೋ ಇಲ್ವೋ ಹೇಳಿ? ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಪ್ರತಿಜ್ಙೆ ಮಾಡಿ ಎಂದು ಅಮಿತ್ ಶಾಗೆ ಸಚಿವ ಕೃಷ್ಣಬೈರೇಗೌಡ ಸವಾಲ್ ಹಾಕಿದರು.



Join Whatsapp