ಕರೆಂಟ್‌ ಕಳ್ಳತನ: ಹೆಚ್‌ಡಿಕೆ ವಿರುದ್ಧ ಬೆಂಗಳೂರಿನಲ್ಲಿ FIR

Prasthutha|

ಬೆಂಗಳೂರು: ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ದೀಪಾವಳಿ ಹಬ್ಬಕ್ಕೆ ಮನೆ ಅಲಂಕರಿಸಲು ರಸ್ತೆಯಲ್ಲಿದ್ದ ಕಂಬದಿಂದ ವಿದ್ಯುತ್‌ ಸಂಪರ್ಕ ಪಡೆದದ್ದು ಬಹಿರಂಗವಾಗುತ್ತಲೇ ಅವರ ವಿರುದ್ಧ ಬೆಂಗಳೂರಿನ ಜಯನಗರದಲ್ಲಿ FIR ದಾಖಲಿಸಲಾಗಿದೆ.

- Advertisement -

ಜಯನಗರ ಪೊಲೀಸ್‌ ಠಾಣೆಯಲ್ಲಿ AEE ಪ್ರಶಾಂತ್‌ ಕುಮಾರ್‌ ಎಂಬುವವರು ದೂರು ನೀಡಿದ್ದು, ಅಪರಾಧ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಅದೇ ದೂರಿನಡಿ FIR ದಾಖಲು ಮಾಡಿಕೊಳ್ಳಲಾಗಿದೆ.

ಹೆಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ದೀಪಾಲಂಕಾರ ಮಾಡಲು ವಿದ್ಯುತ್‌ ಕಳ್ಳತನ ಮಾಡಲಾಗಿದೆ ಎಂದು ಕಾಂಗ್ರೆಸ್‌ ವಿಡಿಯೊ ಸಹಿತ X ನಲ್ಲಿ ಪೋಸ್ಟ್ ಮಾಡಿತ್ತು. ಇದು ನಿಜವೆಂದು ಕುಮಾರಸ್ವಾಮಿ ಒಪ್ಪಿದ್ದರು. ಫೈನ್ ಕಟ್ಟಲು ಸಿದ್ಧ ಎಂದಿದ್ದರು.



Join Whatsapp