ನವದೆಹಲಿ: ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ಎಸ್‌ಬಿಐನ ಚುನಾವಣಾ ಬಾಂಡ್ ಗಳ ಅಂಕಿಅಂಶವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಂಚಿಕೊಂಡಿರುವ ಚುನಾವಣಾ ಬಾಂಡ್‌ಗಳ ಡೇಟಾವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಮಾರ್ಚ್ 15ರ ಒಳಗಡೆ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಚುನಾವಣಾ ಆಯೋಗಕ್ಕೆ ಕೋರ್ಟ್ ಸೂಚಿಸಿತ್ತು. ಒಂದು ದಿನ ಮೊದಲೇ ಆಯೋಗವು ಈ ಕಾರ್ಯವನ್ನು ಮಾಡಿದೆ.
ಚುನಾವಣಾ ಆಯೋಗ 2019ರ ಏಪ್ರಿಲ್ 12 ರಿಂದ 1 ಸಾವಿರ ರೂ. ನಿಂದ ಹಿಡಿದು 1 ಕೋಟಿ ರೂ. ಮೌಲ್ಯದ ಮುಖಬೆಲೆಯ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ವಿವರ ಪ್ರಕಟಿಸಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸಿದವರಲ್ಲಿ ಭಾರತೀಯ ಜನತಾ ಪಾರ್ಟಿ ಟಾಪ್ ಆಗಿದೆ ಎಂದು ಚು. ಆಯೋಗ ಪ್ರಕಟಿಸಿದ ಮಾಹಿತಿ ಹೇಳುತ್ತದೆ. ಬಿಜೆಪಿ ಒಟ್ಟು 8500ಕ್ಕೂ ಅಧಿಕ ಬಾಂಡ್ ಪರ್ಚೇಸ್ ಮಾಡಿದೆ. ಕಾಂಗ್ರೆಸ್ 3146 ಬಾಂಡ್ ಖರೀದಿ ಮಾಡಿದೆ ಎಂದು ಹೇಳಲಾಗಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸುವವರಲ್ಲಿ ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಸೇರಿವೆ ಎಂದು ಹೇಳಲಾಗಿದೆ.
2019ರ ಏ.1ರಿಂದ 2024ರ ಫೆ.15ರವರೆಗೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಅವುಗಳ ಪೈಕಿ 22,030 ಬಾಂಡ್‌ಗಳನ್ನು ನಗದೀಕರಿಸಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತ್ತು. ಇದೀಗ ಈ ಬಾಂಡ್ ಕುರಿತು ಎಸ್‌ಬಿಐ ನೀಡಿದ ಡೇಟಾವನ್ನು ಚುನಾವಣಾ ಆಯೋಗ ವೆಬ್‌ಸೆಟ್‌ಗೆ ಅಪ್ಲೋಡ್ ಮಾಡಿದೆ.
ಇತ್ತೀಚೆಗಷ್ಟೆ ಚುನಾವಣಾ ಬಾಂಡ್ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ರದ್ದುಪಡಿಸಿ ತೀರ್ಪು ನೀಡುತ್ತಾ, ಯಾವ ಪಕ್ಷಗಳು ಎಷ್ಟು ಚುನಾವಣಾ ಬಾಂಡ್ ಖರೀದಿಸಿದೆ. ಈ ಕುರಿತು ಸಂಪೂರ್ಣ ವಿವರ ನೀಡುವಂತೆ ಎಸ್‌ಬಿಐ ಖಡಕ್ ವಾರ್ನಿಂಗ್ ನೀಡಿತ್ತು. ಆದರೆ ವಿವರ ಸಲ್ಲಿಸಲು ಹಿಂದೇಟು ಹಾಕಿದ ಎಸ್‌ಬಿಐ ಕಾಲಾವಕಾಶ ವಿಸ್ತರಣೆಗೆ ಮನವಿ ಮಾಡಿತ್ತು. ಮನವಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ಮಾರ್ಟ್ 12ರೊಳಗೆ ಚುನಾವಣಾ ಆಯೋಗಕ್ಕೆ ಎಲ್ಲಾ ವಿವರ ನೀಡುವಂತೆ ಖಡಕ್ ವಾರ್ನಿಂಗ್ ಮಾಡಿತ್ತು. ಮಾರ್ಚ್ 13ರಂದು ಸಲ್ಲಿಕೆ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಎಸ್‌ಬಿಐ ಸಲ್ಲಿಸಿದ ಮಾಹಿತಿಗಳನ್ನು ಇದೀಗ ಚುನಾವಣಾ ಆಯೋಗ ಬಹಿರಂಗಪಡಿಸಿದೆ.