10 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ ಒಟ್ಟು 96 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ

Prasthutha|

ನವದೆಹಲಿ: ಇಂದು ದೇಶದ ನಾಲ್ಕನೇ ಹಂತದ‌ ಚುನಾವಣೆ ನಡೆಯಲಿದ್ದು, 10 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ ಒಟ್ಟು 96 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

- Advertisement -

ನಾಲ್ಕನೇ ಹಂತದಲ್ಲಿ ಆಂಧ್ರ ಪ್ರದೇಶದ ಎಲ್ಲ 25, ತೆಲಂಗಾಣದ ಎಲ್ಲ 17 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇದರ ಜತೆಗೆ ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳಿಗೂ ವೋಟಿಂಗ್‌ ನಡೆಯುತ್ತಿದೆ. ಆಡಳಿತಾರೂಢ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಎಲ್ಲ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ, ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಎನ್‌ಡಿಎ ಭಾಗವಾಗಿ ಸೀಟು ಹಂಚಿಕೆಯೊಂದಿಗೆ ಸ್ಪರ್ಧಿಸಿವೆ.

ಒಡಿಶಾ: ಒಡಿಶಾದ 147 ವಿಧಾನಸಭೆ ಕ್ಷೇತ್ರಗಳ ಪೈಕಿ ಇಂದು 28 ವಿಧಾನಸಭೆ ಕ್ಷೇತ್ರ ಹಾಗೂ 4 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಒಡಿಶಾದಲ್ಲಿ ಬಿಜು ಜನತಾದಳ ಸದ್ಯ ಅಧಿಕಾರದಲ್ಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಕೂಡ ಒಡಿಶಾವನ್ನು ತೆಕ್ಕೆಗೆ ಪಡೆಯಲು ಹವಣಿಸುತ್ತಿವೆ.

- Advertisement -

ಎಲ್ಲೆಲ್ಲಿ‌ ಲೊಕ ಸಭಾ ಚುನಾವಣೆ?: ಆಂಧ್ರ ಪ್ರದೇಶ(25), ತೆಲಂಗಾಣ(17), ಉತ್ತರ ಪ್ರದೇಶ(13), ಮಹಾರಾಷ್ಟ್ರ(11), ಮಧ್ಯ ಪ್ರದೇಶ(8), ಪಶ್ಚಿಮ ಬಂಗಾಲ(8), ಬಿಹಾರ(5), ಝಾರ್ಖಂಡ್‌(5), ಒಡಿಶಾ(4), ಜಮ್ಮು ಮತ್ತು ಕಾಶ್ಮೀರ(1)ದಲ್ಲಿ ಚುನಾವಣೆ ನಡೆಯುತ್ತಿದೆ.

ಇಂದಿನ ಪ್ರಮುಖ ಅಭ್ಯರ್ಥಿಗಳು: ಅಖೀಲೇಶ್‌ ಯಾದವ್‌, ಮಹುವಾ ಮೊಯಿತ್ರಾ, ಅಮೃತಾ ರಾಯ್‌, ಯೂಸುಫ್ ಪಠಾಣ್‌, ಅಧೀರ್‌ ರಂಜನ್‌ ಚೌಧರಿ, ನಿರ್ಮಲ್‌ ಕುಮಾರ್‌, ಗಿರಿರಾಜ್‌ ಸಿಂಗ್‌, ವೈ.ಎಸ್‌.ಶರ್ಮಿಳಾ, ಅರ್ಜುನ್‌ ಮುಂಡಾ, ಶತ್ರುಘ್ನ ಸಿನ್ಹಾ, ಮಾಧವಿ ಲತಾ, ಅಸಾದುದ್ದೀನ್‌ ಉವೈಸಿ ಮತ್ತು ಇತರರು.



Join Whatsapp