ಮುಂಬೈ; ಶಿವಸೇನೆಯಲ್ಲಿ ವಿಂಗಡಣೆಗೊಂಡಿರುವ ಎರಡೂ ಬಣಗಳಿಗೆ ‘ಬಿಲ್ಲು–ಬಾಣ’ ದ ಸಂಕೇತವಿರುವ ಚಿಹ್ನೆಯನ್ನು ಬಳಸದೇ ಇರುವಂತೆ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಗಳ ನಡುವೆ ಸೃಷ್ಟಿಸಿರುವ ʼಚಿಹ್ನೆಯʼ ಕಲಹದ ಕುರಿತಾಗಿ ಚುನಾವಣಾ ಆಯೋಗವು ಈ ಆದೇಶವನ್ನು ನೀಡಿದೆ.
ಅಂಧೇರಿ ಉಪಚುನಾವಣೆಯಲ್ಲಿ ಶಿವಸೇನೆಯ ಎರಡೂ ಗುಂಪುಗಳು ʼಬಿಲ್ಲು ಬಾಣʼ ದ ಸಂಕೇತವಿರುವ ಚಿಹ್ನೆಯನ್ನು ಬಳಸಬಾರದು ಎಂದು ಆದೇಶಿಸಿದೆ.
ಚುನಾವಣಾ ಆಯೋಗ ನೀಡುವ ವಿವಿಧ ಚಿಹ್ನೆಗಳಲ್ಲಿ ಆಯ್ಕೆ ಮಾಡಿ, ಅಕ್ಟೋಬರ್ 10ರ ಒಳಗೆ ಎರಡೂ ಬಣಗಳು ತಮ್ಮ ನಿರ್ದಿಷ್ಟ ಆಯ್ಕೆಯನ್ನು ತಿಳಿಸಲು ಸೂಚಿಸಿದೆ.