ನವದೆಹಲಿ: ಕೇಂದ್ರ ಸರ್ಕಾರ ಕೂಡ ತನ್ನ ಎಲ್ಲಾ ಇಲಾಖೆಗಳಿಗೆ ಮಾರ್ಚ್ 13ರ ಒಳಗಾಗಿ ಎಲ್ಲಾ ಅಭಿವೃದ್ಧಿ ಕಾರ್ಯಗಳ ಅನಾವರಣ ಮಾಡುವಂತೆ ಸೂಚನೆ ನೀಡಿದ್ದು, ಅದರ ಮರು ದಿನವೇ ಅಥವಾ ಒಂದು ದಿನದ ಬಳಿಕ ಚುನಾವಣೆ ಘೋಷಣೆ ಸಾಧ್ಯತೆಯನ್ನು ಹೇಳಲಾಗುತ್ತಿದೆ.
ಅತ್ತ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೆವಕೇಂದ್ರ ಚುನಾವಣಾ ಆಯೋಗ ಸಿದ್ಧತೆಯನ್ನು ಆರಂಭಿಸಿದೆ. ಚುನಾವಣೆಯ ವೇಳೆ ಅತ್ಯಂತ ಪ್ರಮುಖವಾಗಿರುವ ಭದ್ರತಾ ಸಭೆ ಕೂಡ ಇತ್ತೀಚೆಗೆ ನಡೆದಿದೆ.
ಕೇಂದ್ರ ಚುನಾವಣಾ ಆಯೋಗ ಹಾಗೂ ಗೃಹ ಸಚಿವಾಲಯದ ಬಹಳ ಮುಖ್ಯ ಸಭೆ ನಡೆದಿದ್ದು, ಚುನಾವಣೆಗೆ ಸಿಗುವ ಸೇನಾಪಡೆಗಳು, ಅರೆಸೇನಾ ಪಡೆಗಳು, ಪೊಲೀಸ್ ಅಧಿಕಾರಿಗಳ ಮಾಹಿತಿಗಳನ್ನು ಪಡೆದುಕೊಂಡಿದೆ.
ಎಲ್ಲ ಬೆಳವಣಿಗೆ ನೋಡಿದರೆ ಮಾರ್ಚ್ 14 ಅಥವಾ 15ಕ್ಕೆ ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದ್ದು, ಮೇ 9 ಕ್ಕೆ ಕರ್ನಾಟಕದಲ್ಲಿ ಮತದಾನ ನಡೆಯಲಿದೆ ಎಂದು ಊಹಿಸಲಾಗಿದೆ.