ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆ.16ರಂದು ಚುನಾವಣೆ

Prasthutha|

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ದಿನಾಂಕವನ್ನು ಭಾರತ ಚುನಾವಣಾ ಆಯೋಗಘೋಷಣೆ ಮಾಡಿದ್ದು, ಫೆ.16 ರಂದು ಚುನಾವಣೆ ನಡೆಯಲಿದೆ.

- Advertisement -

ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಪುಟ್ಟಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನಕ್ಕೆ ಫೆ.16 ರಂದು ಚುನಾವಣೆ ನಡೆಯಲಿದೆ.

ಅಧಿಸೂಚನೆ ದಿನಾಂಕ: ಜ.23
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಜ.30
ನಾಮಪತ್ರ ಪರಿಶೀಲನೆ: ಜ.31
ನಾಮಪತ್ರ ಹಿಂಪಡೆಯಲು ಕೊನೆಯ ದಿನ:ಫೆ.2
ಮತದಾನ ದಿನಾಂಕ:ಫೆ.16
ಮತದಾನ ಸಮಯ: ಬೆಳಗ್ಗೆ 8 ರಿಂದ ಸಂಜೆ 4
ಮತ ಎಣಿಕೆ ದಿನಾಂಕ:ಫೆ.20

- Advertisement -

Join Whatsapp