ಚುನಾವಣೆಗೆ ಡೇಟ್ ಅನೌನ್ಸ್ | ಮತ ಎಣಿಕೆಗೆ ಎರಡು ದಿನ ಬೇಕೇ ಎಂದ ನಟ ಉಪೇಂದ್ರ

Prasthutha|

ಬೆಂಗಳೂರು: ವಿಧಾನಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ಟ್ವೀಟ್ ಮಾಡಿರುವ ನಟ ಉಪೇಂದ್ರ ಮತ ಎಣಿಕೆಗೆ ಎರಡು ದಿನ ಬೇಕೆ ಎಂದು ಪ್ರಶ್ನಿಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ, ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಮೇ 13 ಶನಿವಾರದಂದು ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆಗೆ ಎರಡು ದಿನ ಬೇಕೆ ಬಲ್ಲವರು ತಿಳಿಸುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.


ಉಪೇಂದ್ರ ಅವರು ಹೀಗೆ ಯಾಕೆ ಕೇಳಿದ್ದಾರೆ ಅವರ ತಲೆಯಲ್ಲಿ ಹೇಗೆ ಬಂತು ಎಂದು ಸಾರ್ವಜನಿಕರಲ್ಲಿ ಪ್ರಶ್ನೆಗಳ ಜೊತೆಗೆ ಚರ್ಚೆಗಳು ಸಹ ಶುರುವಾಗಿವೆ.

Join Whatsapp