ಲೋಕಸಭಾ ಚುನಾವಣೆ ಸನಿಹದಲ್ಲಿ ಚುನಾವಣಾ ಆಯುಕ್ತ ರಾಜೀನಾಮೆ: 3 ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್

Prasthutha|

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ವಾರಗಳಿರುವಾಗ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ದಿಢೀರ್ ರಾಜೀನಾಮೆಯ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮೂರು ಪ್ರಶ್ನೆಗಳನ್ನು ಎತ್ತಿದ್ದಾರೆ.

- Advertisement -

ಅವರು ಕೇಳಿದ ಮೂರು ಪ್ರಶ್ನೆಗಳು ಹೀಗಿವೆ:

1. ಮುಖ್ಯ ಚುನಾವಣಾ ಆಯುಕ್ತರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು (ಅರುಣ್ ಗೋಯೆಲ್) ನಿಜವಾಗಿಯೂ ರಾಜೀನಾಮೆ ನೀಡಿದ್ದಾರೆಯೇ ಅಥವಾ ಎಲ್ಲಾ ಸ್ವತಂತ್ರ ಸಂಸ್ಥೆಗಳಿಗೆ ಫ್ರಂಟ್ ಸೀಟ್ ಡ್ರೈವಿಂಗ್ ಮಾಡುವ ಮೋದಿ ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ರಾಜೀನಾಮೆ ನೀಡಿದ್ದಾರೆಯೇ?

- Advertisement -

2. ಅಥವಾ ಅವರು ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆಯೇ?

3. ಅಥವಾ ಕೆಲವು ದಿನಗಳ ಹಿಂದೆ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಂತೆ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದ್ದಾರೆಯೇ?

ಮೋದಿಯವರ ಭಾರತವು ಪ್ರತಿದಿನ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಹೆಚ್ಚುವರಿ ಹೊಡೆತವನ್ನು ನೀಡುತ್ತದೆ ಎಂದು ಜೈರಾಮ್ ರಮೇಶ್ ಇದೇ ಸಂದರ್ಭ ಹೇಳಿದ್ದಾರೆ.

ಅರುಣ್ ಗೋಯೆಲ್ ಶನಿವಾರ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಹಠಾತ್ ಕ್ರಮದ ಬಗ್ಗೆ ಊಹಾಪೋಹಗಳು ಎದ್ದಿವೆ.



Join Whatsapp