ಬಿಜೆಪಿಯ ಪ್ರಚಾರಕ್ಕೆ ನೆರವಾಗಲು ಚುನಾವಣಾ ಆಯೋಗದಿಂದ 7 ಹಂತದ ಮತದಾನ: ಮಮತಾ ಆರೋಪ

Prasthutha|

ಮಾಲ್ಡಾ: ಬಿಜೆಪಿಯ ವ್ಯಾಪಕ ಪ್ರಚಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಏಳು ಹಂತಗಳಲ್ಲಿ ಮತದಾನ ಆಯೋಜಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

- Advertisement -

ಮಾಲ್ಡಾ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದೆಲ್ಲ ಮೇ ತಿಂಗಳೊಳಗೆ ಚುನಾವಣೆ ಮುಕ್ತಾಯಗೊಳ್ಳುತ್ತಿತ್ತು. ಈ ವರ್ಷ ವಿಶೇಷ ವಿಮಾನಗಳಲ್ಲಿ ವ್ಯಾಪಕ ಪ್ರಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮತದಾನವನ್ನು ಜೂನ್ 1ರವರೆಗೆ ಮುಂದೂಡಲಾಗಿದೆ. ಪ್ರತಿ ಹಂತದ ಮತದಾನಕ್ಕೂ ಮೊದಲು ಪ್ರಧಾನಿ ಮೋದಿ ಹಾಗೂ ಸಂಪುಟ ದರ್ಜೆಯ ಸಚಿವರು ವಿಶೇಷ ವಿಮಾನಗಳಲ್ಲಿ ಸಂಚರಿಸಿ ಪ್ರಚಾರ ಮಾಡಬಹುದಾಗಿದೆ’ ಎಂದು ಅವರು ಆರೋಪಿಸಿದರು.

ಬಿಸಿಲಿನ ತಾಪದಿಂದ ಜನರು ತೊಂದರೆಗೀಡಾಗಿದ್ದಾರೆ. ಆದರೆ ಬಿಜೆಪಿ ನಾಯಕರು ವಿವಿಐಪಿ ಸೌಲಭ್ಯದೊಂದಿಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.



Join Whatsapp