ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ರೇವಂತ್ ರೆಡ್ಡಿಯವರನ್ನು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಮಾಜಿ ಡಿಜಿಪಿ ಅಂಜನಿ ಕುಮಾರ್ ಅವರ ಅಮಾನತು ಆದೇಶವನ್ನು ಚುನಾವಣಾ ಆಯೋಗ ಹಿಂಪಡೆದಿದೆ.
ತೆಲಂಗಾಣ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಅಂಜನಿ ಕುಮಾರ್ ರೇವಂತ್ ರೆಡ್ಡಿಯನ್ನು ಭೇಟಿಯಾಗಿದ್ದರು. ರೇವಂತ್ ರೆಡ್ಡಿ ಭೇಟಿ ವಿಚಾರವಾಗಿ ಅಂಜನಿ ಕುಮಾರ್ ಅವರಿಂದ ವಿವರಣೆ ಕೇಳಿರುವ ಚುನಾವಣಾ ಆಯೋಗ . ಅವರನ್ನು ಅಮಾನತುಗೊಳಿಸಿತ್ತು. ಅಂಜನಿ ಕುಮಾರ್ ಅವರ ವಿವರಣೆಗೆ ತೃಪ್ತಿ ವ್ಯಕ್ತಪಡಿಸಿದ ಚುನಾವಣಾ ಆಯೋಗ, ಅಮಾನತು ಆದೇಶವನ್ನು ಹಿಂಪಡೆದಿದೆ.