ಚುನಾವಣಾ ಪ್ರಚಾರ: ಸಚಿವ ಕೆಟಿಆರ್ ರಾವ್ ವಾಹನದಿಂದ ಬಿದ್ದ ವೀಡಿಯೋ ವೈರಲ್!

Prasthutha|

ಹೈದರಾಬಾದ್: ತೆಲಂಗಾಣ ಅಸೆಂಬ್ಲಿ ಚುನಾವಣೆಗಳು ಸಮೀಪಿಸುತ್ತಿದ್ದು, ಚುನಾವಣಾ ಪ್ರಚಾರ ಬಿರುಸುಗೊಂಡಿದೆ.

- Advertisement -


ಸಚಿವ ಕೆಟಿ ರಾಮರಾವ್ ಅವರು ಚುನಾವಣಾ ಪ್ರಚಾರದ ಸಂದರ್ಭ ವಾಹನದಿಂದ ಬಿದ್ದಿರುವ ಘಟನೆ ನಿಝಾಮಾಬಾದ್ ನ ಆರ್ಮೂರ್ ನಲ್ಲಿ ನಡೆದಿದೆ. ಈ ವೀಡಿಯೋ ವೈರಲ್ ಆಗಿದೆ.


ವಾಹನದ ಮೇಲೆ ನಿಂತು ಸಾಗುತ್ತಿದ್ದ ಕೆಟಿಆರ್ ಮತ್ತು ಅವರ ತಂಡ ಇದ್ದಕ್ಕಿದ್ದಂತೆ ಮೇಲಿಂದ ಮುಗ್ಗರಿಸಿಬಿದ್ದಿದ್ದಾರೆ. ಜೀವನ್ ರೆಡ್ಡಿ ಅವರು ನಾಮಿನೇಷನ್ ಪತ್ರ ಸಲ್ಲಿಸಲು ತೆರಳುತ್ತಿದ್ದಾಗ ಪ್ರಚಾರ ವಾಹನದ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದಾಗ ಈ ಆಕಸ್ಮಿಕ ಘಟನೆ ನಡೆದಿದೆ.

- Advertisement -

Join Whatsapp