ಚುನಾವಣಾ ಬಾಂಡ್‌ ಸ್ವತಂತ್ರ ಭಾರತದಲ್ಲಿ ನಡೆದಿರುವ ಮೆಗಾ ಹಗರಣ: ಸೀತಾರಾಂ ಯೆಚೂರಿ

Prasthutha|

ನವದೆಹಲಿ: ಚುನಾವಣಾ ಬಾಂಡ್‌ ಯೋಜನೆಯು ಸ್ವತಂತ್ರ ಭಾರತದಲ್ಲಿ ನಡೆದಿರುವ ಅತ್ಯಂತ ಕೆಟ್ಟ, ಮೆಗಾ ಭ್ರಷ್ಟಾಚಾರ ಹಗರಣವಾಗಿದ್ದು, ಇದರಲ್ಲಿ ಮಾಫಿಯಾ ಮಾದರಿಯ ಸುಲಿಗೆ ನಡೆದಿದೆ ಎಂದು ಸಿಪಿಐ ನಾಯಕ ಸೀತಾರಾಂ ಯೆಚೂರಿ ಹೇಳಿದ್ದಾರೆ.

- Advertisement -

ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಮತ್ತು ಆ ಮೂಲಕ ನ್ಯಾಯಸಮ್ಮತವಾಗಿ ದಾನ ಮಾಡಲು ಅನುಕೂಲ ಕಲ್ಪಿಸಿತ್ತು. ಕೆಲ ಕಂಪನಿಗಳು ತಮ್ಮ ವಾರ್ಷಿಕ ಲಾಭಕ್ಕಿಂತಲೂ ಹೆಚ್ಚು ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಇದು ಈ ಹಗರಣದ ವ್ಯಾಪ್ತಿಯನ್ನು ತಿಳಿಸುತ್ತದೆ ಎಂದು ಅವರು ದೂರಿದ್ದಾರೆ.

ಹಣ ವರ್ಗಾವಣೆಗೆ ನಕಲಿ ಕಂಪನಿಗಳನ್ನು ಬಳಸಲಾಗಿದೆ ಎಂದೂ ತಿಳಿಸಿರುವ ಸಿಪಿಐಎಂ ನಾಯಕ,, ವಿವಿಧ ತನಿಖಾ ಏಜೆನ್ಸಿಗಳ ಅಡಿಯಲ್ಲಿ ತನಿಖೆ ಎದುರಿಸುತ್ತಿರುವ ಕಂಪನಿಗಳು ದೇಣಿಗೆ ನೀಡಿವೆ ಎಂದು ಹೇಳಿದ್ದಾರೆ.



Join Whatsapp