ತೆರೆದ ಚರಂಡಿಯೊಳಗೆ ಬಿದ್ದ ವೃದ್ಧನ ರಕ್ಷಣೆ

Prasthutha|

ಬೆಂಗಳೂರು: ಕಂಠಪೂರ್ತಿ ಕುಡಿದಿದ್ದ ವೃದ್ಧ ಭಾರೀ ಮಳೆಗೆ ಜಲಾವೃತವಾಗಿದ್ದ ರಸ್ತೆಯ ಬದಿಯಲ್ಲಿದ್ದ ತೆರೆದ ಚರಂಡಿಯೊಳಗೆ ಬಿದ್ದು, ಗಾಯಗೊಂಡಿರುವ ಘಟನೆ ಅತ್ತಿಬೆಲೆ ಗಡಿ ಹೊಸೂರಿನಲ್ಲಿ ನಡೆದಿದೆ.

- Advertisement -

ಕಂಠಪೂರ್ತಿ ಕುಡಿದು ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದ ವೃದ್ಧ ಭಾರೀ ಮಳೆಗೆ ಜಲಾವೃತವಾಗಿದ್ದ ರಸ್ತೆ ಬದಿ ಇದ್ದ ಚರಂಡಿಗೆ ಬಿದ್ದಿದ್ದಾನೆ. ಟ್ರಾಫಿಕ್ ಜಾಮ್‌ನಲ್ಲಿ ವೃದ್ಧ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದುದನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ ವೃದ್ಧ ಚರಂಡಿಯೊಳಗೆ ಬಿದ್ದಿದ್ದು, ಈ ದೃಶ್ಯವೂ ಸೆರೆಯಾಗಿದೆ.

ಚರಂಡಿಯೊಳಗೆ ಬಿದ್ದಿದ್ದ ವೃದ್ಧ ಮಳೆಯ ಆರ್ಭಟಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ. ಸದ್ಯ ಸ್ಥಳೀಯರ ಸಮಯಪ್ರಜ್ಞೆಯಿಂದ ವೃದ್ಧ ಬದುಕುಳಿದಿದ್ದಾನೆ. ವೃದ್ಧ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರು ಆತನನ್ನು ರಕ್ಷಿಸಿದ್ದಾರೆ.

- Advertisement -

ಘಟನೆಯಲ್ಲಿ ವೃದ್ಧನ ತಲೆಗೆ ಗಾಯವಾಗಿ ರಕ್ತ ಬರುತ್ತಿದ್ದರೂ ಬಳಿಕ ಬಂದ ಪೊಲೀಸರ ಜೊತೆಗೂ ತಾನು ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಕೊನೆಗೆ ವೃದ್ಧನ ಮನವೊಲಿಸಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.



Join Whatsapp