ಕೋವಿಡ್ ಲಸಿಕೆಗೆ ಹೆದರಿ ಮನೆಯ ಮೇಲ್ಛಾವಣಿ ಏರಿ ಕುಳಿತ ವೃದ್ಧ !

Prasthutha|

ದಾವಣಗೆರೆ: ಕೋವಿಡ್ ಲಸಿಕೆ ಹಾಕಲು ಗ್ರಾಮಕ್ಕೆ ಬಂದ ವೈದ್ಯರ ತಂಡವನ್ನು ಕಂಡು ಹೆದರಿದ ವೃದ್ಧರೊಬ್ಬರು ‘ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಒಲ್ಲೆ ಎಂದು ಮನೆಯ ಮೇಲ್ಛಾವಣಿ ಏರಿ ಕುಳಿತ ಘಟನೆ ದಾವಣಗೆರೆಯ ಹದಡಿ ಗ್ರಾಮದಲ್ಲಿ ನಡೆದಿದೆ.

- Advertisement -


ಇನ್ನೂ ಕೆಲವರು ಹೊಲಕ್ಕೆ ಓಡಿ ಹೋಗಿದ್ದು, ಮಹಿಳೆಯೊಬ್ಬರು ಹೊಟ್ಟೆನೋವು ನೆಪ ಹೇಳಿ ಶೌಚಾಲಯದ ಕೊಠಡಿ ಸೇರಿಕೊಂಡು, ಹೊರಬರದೆ ಸತಾಯಿಸಿದ ಘಟನೆಯೂ ಇದೇ ವೇಳೆ ನಡೆದಿದ್ದು, ಅವರನ್ನು ಮನವೊಲಿಸಲು ವೈದ್ಯರ ತಂಡ ಹರಸಾಹಸಪಟ್ಟಿತು.


ದಾವಣಗೆರೆ ತಾಲೂಕಿನಲ್ಲಿ ಶೇ.95ರಷ್ಟು ಲಸಿಕೆಯಾಗಿದ್ದು, ಉಳಿದ ಶೇ.5ರಷ್ಟು ಗುರಿ ಮುಟ್ಟಲು ಹಾಗೂ ಕೊರೊನಾ ಮೂರನೇ ಅಲೆ ಬಂದ ಹಿನ್ನೆಲೆ ವ್ಯಾಕ್ಸಿನ್ ಹಾಕಿಸಲು ದಾವಣಗೆರೆ ತಹಸೀಲ್ದಾರ್ ಗಿರೀಶ್ ನೇತೃತ್ವದ ವೈದ್ಯರ ತಂಡ ಹದಡಿ ಗ್ರಾಮಕ್ಕೆ ಭೇಟಿ ನೀಡಿದಾಗ ಒಬ್ಬೊಬ್ಬರು ಒಂದೊಂದು ಕತೆ ಹೇಳಿ ಲಸಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. 77 ವರ್ಷದ ಹನುಮಂತಪ್ಪ ಅವರು ವ್ಯಾಕ್ಸಿನ್ ಹಾಕಿಸಿಕೊಳ್ಳುವುದಿಲ್ಲ, ಹಾಸಿಕೊಂಡರೆ ನನಗೆ ಜ್ವರ ಬರುತ್ತದೆ ಎಂದು ಏಣಿ ತೆಗೆದುಕೊಂಡು ಹಂಚಿನ ಮನೆ ಮೇಲೆ ಹತ್ತಿ ಕುಳಿತರು. ಕೊನೆಗೆ ತಹಸೀಲ್ದಾರ್ ಗಿರೀಶ್ ಮನವೊಲಿಸಿ, ಕೊನೆಗೂ ಲಸಿಕೆ ಹಾಕಿದರು.

Join Whatsapp