ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ವೃದ್ಧ

Prasthutha|

ಮಂಡ್ಯ: ಅಪ್ರಾಪ್ತ ಬಾಲಕಿಯ ಮೇಲೆ 60 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿದ ಘಟನೆ ಮಳವಳ್ಳಿ ತಾಲೂಕು ಹಲಗೂರು ಬಳಿಯ ಹಳ್ಳಿಯಲ್ಲಿ ನಡೆದಿದೆ.

- Advertisement -


ಸರ್ಕಾರಿ ಶಾಲೆಯಲ್ಲಿ ಬಾಲಕಿ 10ನೇ ತರಗತಿ ಓದುತ್ತಿರುವ ತಂದೆಯಿಲ್ಲದ ಬಾಲಕಿಯನ್ನು ತಾಯಿಯು ಅಜ್ಜಿ–ತಾತನ ಮನೆಯಲ್ಲಿ ಬಿಟ್ಟು ದುಡಿಯಲು ಬೆಂಗಳೂರಿಗೆ ತೆರಳಿದ್ದರು.


ಬಾಲಕಿಯು ಅಜ್ಜಿ ಜೊತೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಹೋಗಿರುವುದನ್ನು ದುರುಪಯೋಗಪಡಿಸಿಕೊಂಡ ಆರೋಪಿ ಬಾಲಕಿಗೆ ಊಟ, ತಿಂಡಿ ಕೊಡಿಸಿ ಸಮೀಪದಲ್ಲೇ ಇದ್ದ ಬಸವನಬೆಟ್ಟದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ವಾಪಸ್‌ ಕರೆತಂದು ಊರ ಹೊರಗಿನ ಗುಡಿಸಲಿನಲ್ಲಿ ಇರಿಸಿ ಮತ್ತೆ ಅತ್ಯಾಚಾರ ಎಸಗಿದ ನಂತರ ಬಾಲಕಿಯನ್ನು ಅಜ್ಜಿ ಮನೆಗೆ ತಂದು ಬಿಟ್ಟಿದ್ದಾನೆ. ಆಕೆಯ ಅಜ್ಜಿ, ಎಲ್ಲಿಗೆ ಹೋಗಿದ್ದೆ ಎಂದು ವಿಚಾರಿಸಿದಾಗ ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ.

Join Whatsapp