ಕೀವ್: ರಷ್ಯಾ ದಾಳಿಗೆ ನಲುಗಿದ ಉಕ್ರೇನ್ ಹೇಳತೀರದ ಪರಿಸ್ಥಿತಿಯಲ್ಲಿದೆ. ನಾಗರಿಕರ, ಸೈನಿಕರ ಸಾವಿನ ಪ್ರಮಾಣ ಹೆಚ್ಚುತ್ತಿದ್ದು ಈಗಾಗಲೇ ಉಕ್ರೇನ್ ರಾಜಧಾನಿಯನ್ನು ವಶಪಡಿಸಿಕೊಳ್ಳಲು ರಷ್ಯಾ ಲಕ್ಷ್ಯವಿರಿಸಿದೆ.
ಈ ಮಧ್ಯೆ ಹಲವಾರು ಮನಕಲಕುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಉಕ್ರೇನ್ ನ ಅಸಹಾಯಕ ಸ್ಥಿತಿಯನ್ನು ಕಂಡು ಜಗತ್ತೇ ಮಮ್ಮಲ ಮರುಗಿದೆ. ದೇಶ ಉಳಸಿಕೊಳ್ಳಲು ಉಕ್ರೇನ್ ಸರ್ಕಾರ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿ ಯುದ್ಧಕ್ಕೆ ಕಳುಹಿಸತ್ತಿದೆ. ಈ ನಡುವೆ 80 ವರ್ಷದ ವೃದ್ಧ ಕೈಯುಲ್ಲೊಂದು ಬ್ಯಾಗ್ ಹಿಡಿದು ಸೇನೆಗೆ ಸೇರಲು ಸರತಿ ಸಾಲಿನಲ್ಲಿ ನಿಂತ ಫೋಟೋ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ.
ವೃದ್ಧನ ಬ್ಯಾಗ್ನಲ್ಲಿ 2 ಟೀ ಶರ್ಟ್, ಪ್ಯಾಂಟ್ಸ್, ಟೂತ್ಬ್ರಶ್, ಹಾಗೂ ಸ್ವಲ್ಪ ತಿಂಡಿಯಿತ್ತು. ನೀವೇಕೆ ಬಂದಿದ್ದೀರಿ ಎಂದು ಕೇಳಿದಾಗ, ನನ್ನ ಮೊಮ್ಮಕ್ಕಳನ್ನು ಉಳಿಸಿಕೊಳ್ಳಲು ಬೇಕಾಗಿ ಯುದ್ಧಮಾಡಬೇಕೆಂದಿದ್ದೇನೆ ಎಂದು ಉತ್ತರಿಸಿದ್ದಾರೆ ಎಂದು ವರದಿ ತಿಳಿಸಿದೆ. ನೆಟ್ಟಿಗರು ವೃದ್ಧನ ಧೈರ್ಯವನ್ನು ಶ್ಲಾಘಿಸಿದ್ದಾರೆ.