ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ 80 ವರ್ಷ ವಯಸ್ಸಿನ ವ್ಯಕ್ತಿ ವೀಲ್‌ಚೇರ್ ಸಿಗದ ಕಾರಣ 1.5 ಕಿಮೀ ದೂರ ನಡೆದು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಅಗತ್ಯವಿರುವಷ್ಟು ಗಾಲಿಕುರ್ಚಿಗಳನ್ನು ಹೊಂದಿರದೇ ವ್ಯಕ್ತಿಯ ಸಾವಿಗೆ ಕಾರಣವಾದ ಕಾರಣಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಏರ್ ಇಂಡಿಯಾಗೆ ರೂ.30 ಲಕ್ಷ ದಂಡ ವಿಧಿಸಿದೆ.
ಪತ್ನಿಯೊಂದಿಗೆ ನ್ಯೂಯಾರ್ಕ್‌ನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದ 80 ವರ್ಷದ ಪ್ರಯಾಣಿಕ, ವೀಲ್‌ಚೇರ್ ಲಭ್ಯವಿಲ್ಲದ ಕಾರಣ 1.5 ಕಿಮೀ ದೂರ ನಡೆಯಬೇಕಾಯಿತು. ನಡೆದು ಅವರಿಗೆ ಹೃದಯಾಘಾತವಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲೇ ಸಾವನ್ನಪ್ಪಿದ್ದಾರೆ.
ನಾಗರಿಕ ವಾಯುಯಾನ ಅಗತ್ಯಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್‌ಕ್ರಾಫ್ಟ್ ನಿಯಮಗಳು, 1937 ರ ಪ್ರಕಾರ ಏರ್ ಇಂಡಿಯಾಕ್ಕೆ 30 ಲಕ್ಷ ರೂ. ಆರ್ಥಿಕ ದಂಡವನ್ನು ವಿಧಿಸಲಾಗಿದೆ ಎಂದು DGCA ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಯಾಣಿಕರಲ್ಲಿ ಅಂಗವಿಕಲರು ಅಥವ ಚಲನಶೀಲತೆ ಕಡಿಮೆಯಾದವರು ಇದ್ದಲ್ಲಿ ಅಂತಹವರಿಗೆ ಅಗತ್ಯ ಸೌಲಭ್ಯ ಒದಗಿಸದೇ ಇರುವುದು ವಿಮಾನ ನಿಯಮಗಳು, 1937 ರ ಉಲ್ಲಂಘನೆಯಾಗಿದೆ ಎಂದು DGCA ತಿಳಿಸಿದೆ.