ಸಂಪುಟ ಪುನರ್ ರಚಿಸಿದ ಮಮತಾ ಬ್ಯಾನರ್ಜಿ: 9 ಶಾಸಕರಿಂದ ನೂತನ ಸಚಿವರಾಗಿ ಪ್ರಮಾಣವಚನ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ಪುನರ್ ರಚಿಸಿದ್ದು, 9 ಮಂದಿ  ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಿದ್ದಾರೆ.

- Advertisement -

ಬಾಬುಲ್ ಸುಪ್ರಿಯೋ ಸೇರಿದಂತೆ 9 ಮಂದಿ ಶಾಸಕರು ಬುಧವಾರ ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಾಬುಲ್ ಸುಪ್ರಿಯೋ ಜೊತೆಗೆ ಸ್ನೇಹಾಶೀಸ್ ಚಕ್ರವರ್ತಿ, ಪಾರ್ಥ ಭೌಮಿಕ್, ಉದಯನ್ ಗುಹಾ, ಪ್ರದೀಪ್ ಮಜುಂದಾರ್ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಪಾಲ ಲಾ ಗಣೇಶನ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಬಿರ್ಬಹ ಹನ್ಸ್ ದ, ಬಿಪ್ಲಬ್ ರೊಚೌದರಿ, ತಜ್ಮುಲ್ ಹುಸೈನ್, ಸತ್ಯಜಿತ್ ಬುರ್ಮಾ ಅವರು ರಾಜ್ಯಸಚಿವರಾಗಿ ಅಧಿಕಾರ ಸ್ವೀಕರಿಸಿದರು.  



Join Whatsapp