ಈದ್ಗಾ ಮೈದಾನ ವಿವಾದ: ವಕ್ಫ್ ಬೋರ್ಡ್ ಗೆ ಪಾಲಿಕೆಯಿಂದ ನೋಟೀಸ್ | ಉತ್ತರಿಸಲು ಇನ್ನು ಒಂದೇ ದಿನ ಅವಕಾಶ

Prasthutha|

ಬೆಂಗಳೂರು: ಈದ್ಗಾ ಮೈದಾನದ ಒಡೆತನದ ಬಗ್ಗೆ ಎದ್ದಿದ್ದ ಗೊಂದಲ ಇತ್ಯರ್ಥ ಗೊಳಿಸುವ ಉದ್ದೇಶದಿಂದ ಬಿಬಿಎಂಪಿ ವಕ್ಫ್ ಬೋರ್ಡ್‌ಗೆ ನೋಟಿಸ್‌ ಜಾರಿ ಮಾಡಿದ್ದು ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಮೈದಾನ ತಮ್ಮದು ಎಂಬುವುದಕ್ಕೆ ಸೂಕ್ತ ದಾಖಲೆ ನೀಡುವಂತೆ ಪಾಲಿಕೆ ವಕ್ಫ್ ಬೋರ್ಡನ್ನು ಕೋರಿಕೊಂಡಿದೆ.

- Advertisement -

ಅಲ್ಲದೇ ದಾಖಲೆಗಳನ್ನು ಒದಗಿಸಲು ಸೂಚಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮಪ್ರಸಾದ್‌ ಮನೋಹರ್ ತಿಳಿಸಿದ್ದಾರೆ. ಕೇಂದ್ರ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಅವರು ಮಾತನಾಡಿ, ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಮೈದಾನ ತಮ್ಮದು ಎಂಬುವುದಕ್ಕೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ನೋಟಿಸ್​ ನೀಡಿ ಮೂರು ದಿನ ಕಾಲಾವಕಾಶ ನೀಡಲಾಗಿದ್ದು ಇನ್ನೂ ಒಂದು ದಿನ ಕಾಲಾವಕಾಶ ಬಾಕಿ ಇದೆ ಮತ್ತು ಬಿಬಿಎಂಪಿ ಉತ್ತರದ ನಿರೀಕ್ಷೆಯಲ್ಲಿದೆ ಎಂದು ಹೇಳಿದ್ದಾರೆ.



Join Whatsapp