ನಾಡಿನೆಲ್ಲೆಡೆ ಸಂಭ್ರಮದ ಈದುಲ್ ಫಿತ್ರ್ ಆಚರಣೆ: ಈದ್ಗಾ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

Prasthutha|

ಮಂಗಳೂರು/ಬೆಂಗಳೂರು: ನಾಡಿನೆಲ್ಲೆಡೆ ಶನಿವಾರ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈದುಲ್ ಫಿತ್ರ್ ನ ವಿಶೇಷ ಪ್ರಾರ್ಥನೆಯನ್ನು ಮುಸ್ಲಿಮರು ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಶನಿವಾರ ಬೆಳಗ್ಗೆ ಭಯ -ಭಕ್ತಿಗಳಿಂದ ನಿರ್ವಹಿಸಿದರು. ಮಂಗಳೂರಿನ ಬಾವುಟ ಗುಡ್ಡೆ ಈದ್ಗಾ ಮೈದಾನ, ಕುದ್ರೋಳಿ ಈದ್ಗಾ ಮೈದಾನ ಸೇರಿದಂತೆ ವಿವಿಧ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ನೂರಾರು ಮುಸ್ಲಿಮರು ಸಮಾವೇಶ ಕೊಂಡು ಸಾಮೂಹಿಕ ಪ್ರಾರ್ಥನೆ ನಿರ್ವಹಿಸಿದರು.

- Advertisement -


ಬಾವುಟಗುಡ್ಡೆ ಈದ್ಗಾ ಮೈದಾನದಲ್ಲಿ ಹಿರಿಯ ವಿದ್ವಾಂಸ ಅಬುಲ್ ಅಕ್ರಂ ಬಾಖವಿ ನಮಾಝ್ ಗೆ ನೇತೃತ್ವ ನೀಡಿ , ಈದ್ ನ ಸಂದೇಶ ನೀಡಿದರು.
ಬೆಳಿಗ್ಗೆಯಿಂದಲೇ ಮಸೀದಿಗಳಿಂದ ತಕ್ಬೀರ್ ನ ಧ್ವನಿಗಳು ಕೇಳಿ ಬಂದವು. ಮುಸ್ಲಿಮರು ಬಡವರಿಗೆ ಫಿತ್ರ್ ಝಕಾತ್ ನೀಡಿದರು.

ನಮಾಝಿನ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗಿಸಿ ಶುಭ ಕೋರುತ್ತಿರುವ ದೃಶ್ಯ ಕಂಡು ಬಂತು. ಪುಟಾಣಿ ಮಕ್ಕಳು ಈದ್ಗಾ ಮೈದಾನಗಳಲ್ಲಿ ಶುಭ ಕೋರುತ್ತಿದ್ದ ಹೃದಯಸ್ಪರ್ಶಿ ದೃಶ್ಯ ಕಂಡುಬಂತು.
ಬೆಂಗಳೂರಿನ ಖುದ್ದೂಸ್ ಶಾ ಈದ್ಗಾ, ಚಾಮರಾಜಪೇಟೆ ಈದ್ಗಾ ಮೈದಾನಗಳಲ್ಲಿ ಸಾವಿರಾರು ಮುಸ್ಲಿಮರು ನಮಾಝ್ ನಿರ್ವಹಿಸಿದರು.



Join Whatsapp