ಮೀಲಾದ್ ಆಚರಣೆ | ಚಿಕ್ಕಮಗಳೂರಿನಲ್ಲಿ ಸಮಾಜ ಸೇವಕರಿಗೆ, ಸಾಧಕರಿಗೆ ಸನ್ಮಾನ

Prasthutha|

ಚಿಕ್ಕಮಗಳೂರು : ನಗರದ  ಜಾಮಿಯಾ ಅರೇಬಿಯ ಕಂಜುಲ್ ಇಮಾನ್ ಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಶಾಹಿದ್ ರಾಜ್ಬಿ ರವರ ನೇತೃತ್ವದಲ್ಲಿ 12 ದಿವಸಗಳ ಅದಾ ಯೆ ಹಸ್ಸನ್ ನಾತ್ ಸ್ಪರ್ಧೆಯ ಅಂತಿಮ ದಿನ ಈದ್ ಮೀಲಾದ್ ಆಚರಿಸಲಾಯಿತು. ಈ ವೇಳೆ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಸಂಘಟನೆಗಳನ್ನು ಗುರುತಿಸಿ ಕೆಲವರನ್ನು ಸನ್ಮಾನಿಸಲಾಯಿತು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

ಕೋವಿಡ್ 19 ವೈರಸ್ ನಲ್ಲಿ ಮೃತಪಟ್ಟ ಸುಮಾರು 40 ಕ್ಕೂ ಹೆಚ್ಚು ಮೃತದೇಹಗಳನ್ನು ಆಯಾ ಧರ್ಮದ ಅನುಸಾರ ಅಂತ್ಯ ಸಂಸ್ಕಾರ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಹಾಗೂ ಸಂಘಟನೆಯ ಇತರ 37 ಮಂದಿ ಕಾರ್ಯಕರ್ತರನ್ನೊಳಗೊಂಡ ತಂಡಕ್ಕೆ ಉತ್ತಮ ಸೇವೆ ಸಲ್ಲಿಸಿದ ‘ಕೊರೊನ ವಾರಿಯರ್ಸ್ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಸುಮಾರು 250 ಕ್ಕೂ ಹೆಚ್ಹು ಕೊರೊನ ಮೃತದೇಹಗಳನ್ನು ಸಾಗಿಸಿದ ಮತ್ತು 600 ಕ್ಕೂ ಹೆಚ್ಹು ಕೊರೊನ ಧೃಡಪಟ್ಟ ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಮೂಲಕ ಸಾಗಿಸಿದ ಆಂಬುಲೆನ್ಸ್ ಚಾಲಕ ಜೀಶನ್ ಅಸದ್ ರವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

- Advertisement -

 ನಗರದ ಶಾಂತಿನಗರ ನಿವಾಸಿ ಮೊಹಮ್ಮದ್ ಅಮ್ಜದ್ ರವರ ಪುತ್ರಿ, ರುಮೀಯ ತಬಸ್ಸುಂ ಅವರು 2020 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಸಹಾಯ ಧನ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇದಾರ ಎ ಶರಿಯಾ, ಮುಖ್ಯ ಖಾಝಿ ಮುಫ್ತಿ ಮೊಹಮ್ಮದ್ ಅಸ್ಲಂ ಖಾದ್ರಿ, ಪ್ರವಾದಿ ಮುಹಮ್ಮದ್ ಮುಸ್ತಾಫಾ ರವರ ಜನ್ಮ ದಿನ ಆಚರಣೆ ಕುರಿತು ಪ್ರವಚನ ನೀಡಿದರು. ಇವರೊಂದಿಗೆ ನಗರದ ಸುನ್ನಿ ಮಸೀದಿಗಳ ಖತೀಬರು ಹಾಜರಿದ್ದರು. ಹಾಜಿ ಯೂಸುಫ್ ರವರ ನೇತೃತ್ವದಲ್ಲಿ ಉಲಮಾ ರವರು ಮೌಲೂದ್ ಓದಿದರು.

Join Whatsapp