ಕಲ್ಲಿಕೋಟೆ: ಈಜಿಪ್ಟ್ ಗ್ರ್ಯಾಂಡ್ ಮುಫ್ತಿ ಶೇಖ್ ಶೌಕಿ ಅಲ್ಲಾಂ ಕೇರಳಕ್ಕೆ ಆಗಮಿಸಿದ್ದಾರೆ. ಕೋಝಿಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಮರ್ಕಝ್ ಡೈರೆಕ್ಟರ್ ಜನರಲ್ ಸಿ.ಮುಹಮ್ಮದ್ ಫೈಝಿ ಮತ್ತು ಪ್ರೊ-ಚಾನ್ಸಲರ್ ಡಾ. ಹುಸೇನ್ ಸಖಾಫಿ ಚುಳ್ಳಿಕ್ಕೋಡ್ ಬರಮಾಡಿಕೊಂಡರು.
ಭಾರತದ ವಿದೇಶಾಂಗ ಸಚಿವಾಲಯದ ಅತಿಥಿಯಾಗಿ ಆರು ದಿನಗಳ ಭಾರತ ಪ್ರವಾಸದಲ್ಲಿರುವ ಶೌಖಿ ಅಲ್ಲಾಂ ಅವರು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಸಂದರ್ಶಿಸಿದ ಬಳಿಕ ಮರ್ಕಝ್ ನಾಲೆಡ್ಜ್ ಸಿಟಿಯ ಜಾಮಿ-ಉಲ್-ಫುತೂಹ್ ಮಸ್ಜಿದ್ ನಲ್ಲಿ ಇಂದು ಜುಮಾ ನಮಾಝ್ ಗೆ ನೇತೃತ್ವ ನೀಡಿದರು.
ಇಂದು ಸಂಜೆ ಕಾರಂದೂರು ಮರ್ಕಝ್ ನಲ್ಲಿ ನಡೆಯಲಿರುವ ಸಭೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮರ್ಕಝ್ ಮೂಲಗಳು ತಿಳಿಸಿವೆ.