ಅರ್ಧ ವರ್ಷ ಕಳೆದರೂ ಪಠ್ಯ ಪುಸ್ತಕ ನೀಡಲಾಗದ ಶಿಕ್ಷಣ ಸಚಿವ ಧ್ಯಾನ ಮಾಡಿಸಲು ಮುಂದಾಗಿದ್ದಾರೆ: ಕಾಂಗ್ರೆಸ್ ಕಿಡಿ

Prasthutha|

ಬೆಂಗಳೂರು: ಅರ್ಧ ವರ್ಷ ಕಳೆದರೂ ಪಠ್ಯ ಪುಸ್ತಕ ನೀಡಲಾಗದ ಶಿಕ್ಷಣ ಸಚಿವ ಧ್ಯಾನ ಮಾಡಿಸಲು ಮುಂದಾಗಿದ್ದಾರೆ! ಓದಲು ಪುಸ್ತಕವಿಲ್ಲದಾಗ ವಿದ್ಯಾರ್ಥಿಗಳಿಗೆ ಧ್ಯಾನ, ಭಜನೆ ಮಾಡುವುದೊಂದೇ ದಾರಿ! ಪಠ್ಯಪುಸ್ತಕ, ಶೂ, ಸಾಕ್ಸ್, ಯುನಿಫಾರ್ಮ್ಗಳನ್ನು ನೀಡಲು ಯೋಗ್ಯತೆ ಇಲ್ಲದ ಸಚಿವ ಬಿ.ಸಿ.ನಾಗೇಶ್ ಎಂಬ ಅಸಮರ್ಥ ಸಚಿವರ ಕೈಯ್ಯಲ್ಲಿ ಮಕ್ಕಳ ಭವಿಷ್ಯಕ್ಕೆ ಕತ್ತಲಾವರಿಸಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿ ವಾಹಿನಿಯೊಂದರ ವೀಡಿಯೋ ಕ್ಲಿಪ್ ಅಪ್ ಲೋಡ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಶೈಕ್ಷಣಿಕ ವರ್ಷ ಆರಂಭಗೊಂಡು ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಪಠ್ಯಪುಸ್ತಕ ಇನ್ನೂ ಕೊಟ್ಟಿಲ್ಲ. ಇದರ ಬಗ್ಗೆ ಗಮನ ಹರಿಸುವ ಬದಲು ಧ್ಯಾನ ಮಾಡಿಸಲು ಮುಂದಾಗಿದ್ದಾರೆ ಎಂದು ಶಿಕ್ಷಣ ಸಚಿವರ ವಿರುದ್ಧ ಟೀಕಾಪ್ರಹಾರ ನಡೆಸಿದೆ.

Join Whatsapp