ಶಿಕ್ಷಣ ಜನಾಂಗೀಯ ತಾರತಮ್ಯದ ಮನೋಭಾವವನ್ನು ತೊಡೆದುಹಾಕುವಲ್ಲಿ ವಿಫಲವಾಗಿದೆ: ಮೊಹಮ್ಮದ್ ಶಾಫಿ

Prasthutha|

ನವದೆಹಲಿ: ಚಾತುರ್ವರ್ಣ ಸಿದ್ಧಾಂತದ ಮೇಲೆ ನಿರ್ಮಿಸಲಾದ ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಒಂದು ಸಾಮಾಜಿಕ ಅನಿಷ್ಟವಾಗಿದೆ. ಶಿಕ್ಷಣ ಜನಾಂಗೀಯ ತಾರತಮ್ಯದ ಮನೋಭಾವವನ್ನು ತೊಡೆದುಹಾಕುವಲ್ಲಿ ವಿಫಲವಾಗಿದೆ ಎಂದು ತೋರುತ್ತದೆ. ಇದರಿಂದ ಬಾಧಿತ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಂದೋ ತಮ್ಮ ಉನ್ನತ ಶಿಕ್ಷಣದ ಆಕಾಂಕ್ಷೆಗಳನ್ನು ಬಿಟ್ಟುಬಿಡುತ್ತಾರೆ ಅಥವಾ ತಮ್ಮ ಶಿಕ್ಷಕರು, ಮಾರ್ಗದರ್ಶಕರು ಮತ್ತು ಆಡಳಿತ ಮಂಡಳಿಯವರಿಂದ ಜನಾಂಗೀಯ ತಾರತಮ್ಯದಿಂದ ಬೇಸತ್ತು ತಮ್ಮ ಅಮೂಲ್ಯವಾದ ಜೀವನವನ್ನು ಕೊನೆಗೊಳಿಸಿಕೊಳ್ಳುವ ಮಾರ್ಗ ಆರಿಸಿಕೊಳ್ಳುತ್ತಾರೆ. ಇದು ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಬಹುತೇಕ ಸಾಮಾನ್ಯ ವಿದ್ಯಮಾನವಾಗಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಾಫಿ ಹೇಳಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಎಸ್ ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಾಫಿ, ದೇಶದಲ್ಲಿ ಕೇಸರಿಕರಣದ ಕಾರಣಕ್ಕೆ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲಿ ಜಾತಿವಾದಿ ಮನಸ್ಥಿತಿಗೆ ಪ್ರೇರಣೆ ಸಿಗುತ್ತಿದೆ. ಮೇಲ್ಜಾತಿಯ ಸಮುದಾಯಗಳಿಂದ ಬಂದವರು ಜಾತಿಯ ಹೆಸರಿನಲ್ಲಿ ತಾರತಮ್ಯ ಮಾಡಲು ತಮಗೆ ಪರವಾನಗಿ ಇದೆ ಎಂಬಂತ ಮನಸ್ಥಿತಿಗೆ ಜಾರುತ್ತಿದ್ದಾರೆ ಎಂದರು.

ಕೇರಳದ ಕ್ಯಾಲಿಕಟ್ ನಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ದಲಿತ ಸಮುದಾಯದ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ವೈಶಾಖ್ ಪ್ರೇಮ್ಕುಮಾರ್ ಅವರನ್ನು ಅಮಾನತುಗೊಳಿಸಿರುವುದು ಜಾತಿಯ ತಾರತಮ್ಯ ಮತ್ತು ಕೇಸರಿಕರಣದ ಪ್ರಕರಣಗಳಿಗೆ ತಾಜಾ ಉದಾಹರಣೆ. ಕಳೆದ ತಿಂಗಳು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಂಕುಸ್ಥಾಪನೆಯ ದಿನದಂದು ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಅವರನ್ನು ಒಂದು ವರ್ಷದ ಅವಧಿಗೆ ಅಮಾನತುಗೊಳಿಸಲಾಗಿತ್ತು. ಆದಾಗ್ಯೂ, ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಮತ್ತು ಮೇಲ್ಮನವಿಯ ನಂತರ ಅವರ ಅಮಾನತನ್ನು ಅಧಿಕಾರಿಗಳು ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ತಡೆಹಿಡಿಲಾಗಿತ್ತು ಎಂದರು.

- Advertisement -

ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತೀಯ ನಾಗರಿಕರ ಸಾಂವಿಧಾನಿಕ ಹಕ್ಕು. ಭಾರತ ಸಂವಿಧಾನದ 19 (1) (ಎ) ಆರ್ಟಿಕಲ್ ಪ್ರಕಾರ: (1) ಎಲ್ಲಾ ನಾಗರಿಕರು (ಎ) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹೊಂದಿರುತ್ತಾರೆ. ಈ ಹಕ್ಕು ಮತ್ತು ಇದರ ಜೊತೆಗೆ ಇತರ ಅನೇಕ ಸಾಂವಿಧಾನಿಕ ಹಕ್ಕುಗಲು4 ಈಗ ಕೇವಲ ಆಳುವ ಹಿಂದುತ್ವ ಫ್ಯಾಸಿಸ್ಟ್ಗಳನ್ನು ಬೆಂಬಲಿಸುವ ಮತ್ತು ಅವರೊಂದಿಗೆ ನಿಲ್ಲುವವರ ಹಕ್ಕುಗಳಾಗಿ ಮಾರ್ಪಟ್ಟಿವೆ. ಒಬ್ಬ ವ್ಯಕ್ತಿಯ ಅಭಿಪ್ರಾಯವು ಆಡಳಿತ ಪಕ್ಷ ಮತ್ತು ಸಂಘಪರಿವಾರಕ್ಕೆ ಅನುಕೂಲಕರವಾಗಿಲ್ಲದಿದ್ದರೆ, ಅಂತಹ ಅಭಿಪ್ರಾಯ ವ್ಯಕ್ತಪಡಿಸಿದ ವ್ಯಕ್ತಿ ಪ್ರತಿಕೂಲ ಸನ್ನಿವೇಶ ಮತ್ತು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಇದೇ ಹೊಸ ಭಾರತವಾಗಿದ್ದು, ಇಲ್ಲಿ ಅತ್ಯಂತ ಗೌರವಿಸಲ್ಪಡುವ ಸಂವಿಧಾನವನ್ನು ನಿರಂತರವಾಗಿ ಅಗೌರವ ಮತ್ತು ಅಪಹಾಸ್ಯ ಮಾಡಲಾಗುತ್ತಿದೆ ಎಂದರು.

ವೈಶಾಖ್ ಪ್ರೇಮಕುಮಾರ್ ಅವರ ಅಮಾನತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೊದಲ ಅಥವಾ ಕೊನೆಯ ಘಟನೆಯೇನಲ್ಲ. ವೈಶಾಖ್ ಅವರ ವಿರುದ್ಧ ನಿಂತು ಅವರು ಪ್ರದರ್ಶಿಸಿದ ‘ಭಾರತ ರಾಮರಾಜ್ಯವಲ್ಲ’ ಎಂಬ ಭಿತ್ತಿಪತ್ರವನ್ನು ಹರಿದು ಹಾಕಿದವರು ಯಾವುದೇ ಆತಂಕವಿಲ್ಲದೆ ಬಹಿರಂಗವಾಗಿ ಓಡಾಡುತ್ತಿದ್ದಾರೆ. ವೈಶಾಖ್ ಅವರ ವಿರುದ್ಧ ಮಾತ್ರ “ಶಾಂತಿ ಕದಡುವ ಮತ್ತು ಸಂಸ್ಥೆಯ ಗೌರವವನ್ನು ಧಕ್ಕೆ ತಂಡ ಆರೋಪ” ಹೊರಿಸಲಾಗಿದೆ ಎಂದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತಿವಾದಿ ಮನೋಭಾವ ಮತ್ತು ಕೇಸರಿಕರಣದ ಮನಸ್ಥಿತಿ ದಲಿತ ವಿದ್ಯಾರ್ಥಿ ವೈಶಾಖ್ ಅಮಾನತಾಗಲು ಕಾರಣವಾದ ಪ್ರಮುಖ ಅಂಶಗಳು. ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ನ್ಯಾಯ ನಿರಾಕರಣೆ ವ್ಯಾಪಕವಾಗಿದೆ. ಇದಕ್ಕೆ ಅಲ್ಲಿನ ಆಡಳಿತ ಮಂಡಲಿಗಳಲ್ಲಿ ಮೇಲ್ವರ್ಗದ ಜನರೇ ತುಂಬಿರುವುದೇ ಕಾರಣ. ಅವರು ಈಗಲೂ ಅಸ್ಪೃಶ್ಯತೆ ಆಚರಿಸುತ್ತಾರೆ ಎಂದರು.

ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಮತ್ತು ಐಐಟಿ ಮದ್ರಾಸ್ನಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಫಾತಿಮಾ ಲತೀಫ್ ವಿಶ್ವವಿದ್ಯಾಲಯದ ಪಿ ಹೆಚ್ ಡಿ ವಿದ್ಯಾರ್ಥಿ ಮತ್ತು ಐಐಟಿ ಪ್ರಾಧ್ಯಾಪಕರು ಆತ್ಮಹತ್ಯೆ ಮಾಡಿಕೊಂಡ ಪ್ರಮುಖ ಹೆಸರುಗಳು. ಇತರ ವಿಶ್ವವಿದ್ಯಾಲಯಗಳಲ್ಲಿಯೂ ಸಹ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.ವೈಶಾಖ್ ವಿರುದ್ಧ ಕ್ರಮ ಕಒಗೊಂಡಿರುವ ಹೊತ್ತಿನಲ್ಲಿ, ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆಯನ್ನು ಬಹಿರಂಗವಾಗಿ ಹೊಗಳಿದ ಪ್ರೊ. ಶೈಜಾ ಆಂಡವನ್ ಯಾವುದೇ ಕ್ರಮ ಇಲ್ಲದೆ ಐಐಟಿಯಲ್ಲಿ ನೆಮ್ಮದಿಯಾಗಿದ್ದಾರೆ.ದೇಶದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಸ್ತಿತ್ವದಲ್ಲಿದೆ. ಅದರ ಜವಾಬ್ದಾರಿ ಇಂತಹ ಪ್ರಕರಣಗಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸುವುದು. ಆದರೆ ಇಂತಹ ವಿಚಾರಗಳಲ್ಲಿ ಮಧ್ಯ ಪ್ರವೇಶಿಸಬೇಕಾದ ಸಚಿವಾಲಯದ ಮೌನ ಶೋಷಿತ ಸಮುದಾಯಗಳ ಸಬಲೀಕರಣ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿನ ಜಾತಿ ತಾರತಮ್ಯ ಮತ್ತು ಕ್ಯಾಂಪಸ್ಗಳ ಕೇಸರಿಕರಣವನ್ನು ಅಂತ್ಯಗೊಳಿಸಲು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋರಾಟ ನಡೆಸಲು ದೇಶದ ಜಾತ್ಯತೀತ ಮನಸ್ಸುಗಳು ಮುಂದೆ ಬರಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರೆ ನೀಡಿದೆ.




Join Whatsapp