ಪೆಗಾಸಸ್ ಪ್ರಕರಣ: ಎಸ್ ಐಟಿ ರಚಿಸುವಂತೆ ಕೋರಿ ಸುಪ್ರಿಂ ಮೆಟ್ಟಿಲೇರಿದ ಎಡಿಟರ್ಸ್ ಗಿಲ್ಡ್

Prasthutha|

ನವದೆಹಲಿ, ಆ.3: ಪೆಗಸಸ್ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ಕೋರಿ ಪತ್ರಿಕಾ ಸ್ವಾತಂತ್ರ್ಯ ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾದ ಭಾರತೀಯ ಸಂಪಾದಕರ ಕೂಟ -ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

- Advertisement -


ಬೇಹು- ತಂತ್ರಾಂಶ ಅಳವಡಿಸಲು ವಿದೇಶಿ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದ ವಿವರ ಮತ್ತು ಅಂತಹ ತಂತ್ರಾಂಶ ಬಳಸಿದ ವ್ಯಕ್ತಿಗಳ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೂಡ ಮನವಿ ಮಾಡಲಾಗಿದೆ.
ಎಲೆಕ್ಟ್ರಾನಿಕ್ ಕಣ್ಗಾವಲು, ಹ್ಯಾಕಿಂಗ್ ಮತ್ತು ಬೇಹು- ತಂತ್ರಾಂಶ ಬಳಕೆ ಹಾಗೂ ಕಣ್ಗಾವಲು ಕುರಿತಂತೆ ಈಗಿರುವ ಕಾನೂನು ವ್ಯವಸ್ಥೆಯ ಸಾಂವಿಧಾನಿಕ ಅಧಿಕಾರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಪ್ರಶ್ನಿಸಿದೆ.



Join Whatsapp