ಚೀನಾ ಮೂಲದ ಮೊಬೈಲ್ ಉತ್ಪಾದನಾ ಕಂಪನಿ ಶಿಯೋಮಿ ಗೆ ಇ.ಡಿ ಸಮನ್ಸ್

Prasthutha|

ನವದೆಹಲಿ: ಚೀನಾದ ಮೊಬೈಲ್ ಉತ್ಪಾದನಾ ಕಂಪನಿ ಶಿಯೋಮಿಗೆ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ತನಿಖೆಗಾಗಿ ಫೇಮಾ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ಶಿಯೋಮಿಯ ಜಾಗತಿಕ ಉಪಾಧ್ಯಕ್ಷ ಮನು ಕುಮಾರ್ ಜೈನ್ ಅವರಿಗೆ ಸಮನ್ಸ್ ನೀಡಿದೆ.

- Advertisement -

ಕಳೆದ ಕೆಲವು ವರ್ಷಗಳಿಂದ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ಕೆಲ ಉಲ್ಲಂಘನೆಯಾಗಿದೆ. ಸಂಸ್ಥೆಯೂ ವಿದೇಶಕ್ಕೆ ಕೋಟ್ಯಂತರ ರೂಪಾಯಿ ಮೊತ್ತದ ಹಣ ಕಳಿಸಿರುವುದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ, ಸಂಸ್ಥೆ ಹಾಗೂ ಅದರ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ.

ಶಿಯೋಮಿಯ ಭಾರತದ ಮಾಜಿ ಮುಖ್ಯಸ್ಥರಾಗಿದ್ದ ಮನು ಕುಮಾರ್ ಜೈನ್ ಅವರಿಗೆ ಕಂಪನಿಗೆ ಸಂಬಂಧಿಸಿದ ಆರ್ಥಿಕ ದಾಖಲೆಗಳನ್ನು ಖುದ್ದಾಗಿ ಬಂದು ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ ಸೂಚಿಸಿದೆ. ಶಿಯೋಮಿಯ ಷೇರು, ಹೂಡಿಕೆಯ ಮೂಲ, ವೆಂಡರ್ ಕಾಂಟ್ರಾಕ್ಟ್ ಗಳು ಹಾಗೂ ಭಾರತದ ಮ್ಯಾನೇಜ್ಮೆಂಟ್ ಗೆ ಪಾವತಿಸಿರುವ ಹಣ ಹಾಗೂ ವಿದೇಶಕ್ಕೆ ಕಳಿಸಿರುವ ಹಣದ ಮಾಹಿತಿಗಳನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದೆ ಎಂದು ತಿಳಿದು ಬಂದಿದೆ.

Join Whatsapp