ಕೋಲ್ಡ್ ಪ್ಲೇ, ದಿಲ್ಜಿತ್ ಸಂಗೀತ ಕಚೇರಿ ಮೇಲೆ ED ದಾಳಿ

Prasthutha|

ನವದೆಹಲಿ: ಬೆಂಗಳೂರಿನಲ್ಲಿ ಇದೇ ಡಿಸೆಂಬರ್ 6 ರಂದು ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ಟಿಕೆಟ್ ಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ದೇಶದ ಹಲವೆಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

- Advertisement -


ಕೋಲ್ಡ್ ಪ್ಲೇ ಮತ್ತು ದಿಲ್ ಜೀತ್ ದೋಸಾಂಜ್ ಅವರ ‘ದಿಲ್-ಲುಮಿನಾಟಿ’ ಬಹುನಿರೀಕ್ಷಿತ ಸಂಗೀತ ಕಚೇರಿಯ ಟಿಕೆಟ್ ಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕ, ದೆಹಲಿ, ಮುಂಬೈ, ಜೈಪುರ, ಚಂಡೀಗಢ ರಾಜ್ಯಗಳಲ್ಲಿ ಜಾರಿ ನಿರ್ದೇಶನಾಲಯ (ED) ಬೃಹತ್ ಶೋಧ ಕಾರ್ಯಾಚರಣೆ ನಡೆಸಿದೆ.


ಈ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಅಕ್ರಮಕ್ಕೆ ಬಳಸಲಾಗಿದೆಯೆನ್ನಲಾಗಿರುವ ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಹಾಗೂ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡು, ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

- Advertisement -


ಕೋಲ್ಡ್ ಪ್ಲೇ ಅವರ (ಬ್ರಿಟಿಷ್ ರಾಕ್ ಬ್ಯಾಂಡ್) ‘ಮ್ಯೂಸಿಕ್ ಆಫ್ ದಿ ಸ್ಪಿಯರ್ಸ್ ವರ್ಲ್ಡ್ ಟೂರ್’ ಸಂಗೀತ ಕಾರ್ಯಕ್ರಮವು ನ.18, 19, 21 ರಂದು ಮುಂಬೈನಲ್ಲಿ ನಡೆಯಲಿದೆ. ಜೊತೆಗೆ ದಿಲ್ಜೀತ್ ದೋಸಾಂಜ್ ಅವರ ‘ದಿಲ್-ಲುಮಿನಾಟಿ’ ಸಂಗೀತ ಕಾರ್ಯಕ್ರಮ ಬೆಂಗಳೂರಿನಲ್ಲಿ ಡಿ.6 ರಂದು ನಡೆಯಲಿದೆ. ಜನಪ್ರಿಯ ಶೋಗಳಿಗೆ ಟಿಕೆಟ್ ಬೇಡಿಕೆ ಹೆಚ್ಚಾಗಿದ್ದು, ಬುಕ್ ಮೈಶೋ ಮತ್ತು ಜೊಮ್ಯಾಟೊ ಲೈವ್ ನಂತಹ ಅಧಿಕೃತ ವೇದಿಕೆಗಳಲ್ಲಿ ಟಿಕೆಟ್ ಗಳ ತ್ವರಿತ ಮಾರಾಟಕ್ಕೆ ಕಾರಣವಾಯಿತು. ಆದರೆ, ಕೆಲವರು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಟಿಕೆಟ್ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.



Join Whatsapp