ಕೆಜಿಎಫ್ ಬಾಬುಗೆ ಮತ್ತೆ ಇಡಿ ಸಮನ್ಸ್ ಜಾರಿ

Prasthutha|

ಬೆಂಗಳೂರು: ಉದ್ಯಮಿ ಯೂಸೂಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬುಗೆ ಮತ್ತೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿ ನಾಳೆ(ಜ.19) ಬೆಳಗ್ಗೆ 11 ಗಂಟೆಗೆ ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆ ಹಾಜರಾಗುವಂತೆ ಸೂಚಿಸಿದ್ದಾರೆ
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ಸಾವಿರ ಕೋಟಿ ಆಸ್ತಿ ಒಡೆಯ ಎಂದೇ ಗಮನ ಸೆಳೆದಿದ್ದ ಕೆಜಿಎಫ್ ಬಾಬು ನಿವಾಸದ ಮೇಲೆ 2022ರ ಮೇ ತಿಂಗಳಲ್ಲಿ ಐಟಿ ದಾಳಿಯಾಗಿತ್ತು.

- Advertisement -


ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್’ಗೆ ಕೋಟ್ಯಂತರ ರೂಪಾಯಿ ಸಾಲ ಕೊಟ್ಟಿದ್ದ ಗುಜರಿ ವ್ಯಾಪಾರಿ, ಕಾಂಗ್ರೆಸ್’ನ ಮಾಜಿ ಮುಖಂಡ ಯೂಸೂಫ್ ಶರೀಫ್ (ಕೆಜಿಎಫ್ ಬಾಬು)ಗೆ ಕಳೆದ ಆಗಸ್ಟ್’ನಲ್ಲಿ ಇಡಿ ವಿಚಾರಣೆ ನಡೆಸಿತ್ತು. ಇದೀಗ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಐಎಂಎ ಬಹುಕೋಟಿ ಅಕ್ರಮ ಪ್ರಕರಣದಲ್ಲಿ ಸಿಲುಕಿರುವ ಶಾಸಕ ಜಮೀರ್’ರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸಿದ್ದರು. ಕೆಜಿಎಫ್ ಬಾಬು ಬಳಿ 3 ಕೋಟಿ ರೂ. ಸಾಲ ಪಡೆದಿರುವುದಾಗಿ ಜಮೀರ್ ಹೇಳಿಕೆ ನೀಡಿದ್ದರು.
ಇದರ ಆಧಾರದ ಮೇಲೆ ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿ ಅಜ್ಯುಡಿಕ್ಟಿಂಗ್ ಕಮಿಟಿಗೆ ಒಪ್ಪಿಸಿದ್ದರು.

Join Whatsapp