ನವದೆಹಲಿ: ಇಡಿ- ಜಾರಿ ನಿರ್ದೇಶನಾಲಯವು ಬಿಬಿಸಿ ಇಂಡಿಯಾ ಮೇಲೆ ಫೆಮಾ- ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ಫೆಬ್ರವರಿಯಲ್ಲಿ ಆದಾಯ ತೆರಿಗೆ ಇಲಾಖೆಯವರು ಬಿಬಿಸಿ ಇಂಡಿಯಾದ ದಿಲ್ಲಿ, ಮುಂಬೈ ಕಚೇರಿಗಳ ಮೇಲೆ ದಾಳಿ ನಡೆಸಿ, ಲಾಭ ಸಾಗಿಸುವಲ್ಲಿ ನಿಯಮ ಉಲ್ಲಂಘಿಸಿರುವುದಾಗಿ ಹೇಳಿತ್ತು.
ಲಾಭದ ಬಗ್ಗೆ ಸರಿಯಾಗಿ ಲೆಕ್ಕವಿಡದೆ, ವಿದೇಶಿ ವಿನಿಮಯ ನಿಯಮ ಪಾಲಿಸದೆ ಲಾಭಾಂಶವನ್ನು ಬಿಬಿಸಿ ಮುಖ್ಯ ಕಚೇರಿಗೆ ರವಾನಿಸಲಾಗಿದೆ. ಉದ್ದೇಶಪೂರ್ವಕವಾಗಿ ಕೆಲವದರ ಬೆಲೆಯನ್ನು ಅತಿಯಾಗಿ ತೋರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಆಪಾದನೆ ಮಾಡಿತ್ತು.
ಜನವರಿ 17ರಂದು ಬಿಬಿಸಿಯು 2002ರ ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರ ಹೇಳುವ ‘ಇಂಡಿಯಾ: ದ ಮೋದಿ ಕ್ವಶ್ಚನ್’ ಎಂಬ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿತ್ತು. ಅದರ ಬೆನ್ನಿಗೇ ಬಿಬಿಸಿ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು.
ಆ ಸಾಕ್ಷ್ಯ ಚಿತ್ರವು ಭಾರತದ ಸಾರ್ವಭೌಮತೆಗೆ, ಸಮಗ್ರತೆಗೆ ಹಾನಿ ಉಂಟು ಮಾಡಿದೆ ಎಂದು ಬಿಜೆಪಿ ಸರಕಾರ ಹೇಳಿತ್ತು.