ಇಡಿ, ಸಿಬಿಐ, ಎನ್.ಸಿ.ಬಿ ಕಾಯ್ದೆಗಳು ದೇಶದಲ್ಲಿ ದುರ್ಬಳಕೆಯಾಗುತ್ತಿವೆ: ಶರದ್ ಪವಾರ್

Prasthutha|

ಮುಂಬೈ: ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಮಾದಕದ್ರವ್ಯ ನಿಯಂತ್ರಣ ಬ್ಯೂರೋ ಸೇರಿದಂತೆ ಕೇಂದ್ರೀಯ ಸಂಸ್ಥೆಗಳನ್ನು ದೇಶದಲ್ಲಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.

- Advertisement -

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಎನ್.ಸಿ.ಪಿ ಅಧ್ಯಕ್ಷರಿಗೆ ಸಂಬಂಧಿಸಿದ ಆದಾಯ ತೆರಿಗೆ ಇಲಾಖೆಯ ದಾಳಿಗಳನ್ನು ಉಲ್ಲೇಖಿಸಿ ಪವಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಾತ್ರವಲ್ಲ ಕೇಂದ್ರ ತನಿಖಾ ಏಜೆನ್ಸಿಗಳು ಸತತ ಆರನೇ ದಿನ ದಾಳಿ ನಡೆಸುತ್ತಿದೆ ಎಂದು ತಿಳಿಸಿದರು.

ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಪ್ರತಿಪಕ್ಷಗಳ ವಿರುದ್ಧ ಛೂ ಬಿಡುತ್ತಿದೆ ಎಂದು ಅವರು ಆರೋಪಿಸಿದರು.

- Advertisement -

ರಾಜ್ಯದ ಹಿರಿಯ ಎನ್.ಸಿ.ಪಿ ನಾಯಕ ಅಜಿತ್ ಪವಾರ್, ಅನಿಲ್ ದೇಶಮುಖ್, ಬಾಲಿವುಡ್ ನಟನ ಪುತ್ರ ಆರ್ಯಾನ್ ಸೇರಿದಂತೆ ಹಲವಾರು ಗಣ್ಯರ ವಿರುದ್ಧ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಲಾಗುತ್ತಿದೆ ಎಂದು ಅವರು ಗುಡುಗಿದರು.

Join Whatsapp