ದೇಶದಲ್ಲಿ ಶ್ರೀಮಂತರು, ಬಡವರ ನಡುವೆ ಆರ್ಥಿಕ ಅಸಮಾನತೆ: ಮಾಯಾವತಿ

Prasthutha|

ಲಖನೌ: ದೇಶದಲ್ಲಿ ಉಂಟಾಗಿರುವ ನಿರುದ್ಯೋಗದ ಪರಿಸ್ಥಿತಿ ಸಂಬಂಧ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ, ಶ್ರೀಮಂತರು ಮತ್ತು ಬಡವರ ನಡುವೆ ಏರ್ಪಡುತ್ತಿರುವ ಆರ್ಥಿಕ ಅಸಮಾನತೆಯ ಅಂತರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -


ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‘ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಉದ್ಯೋಗದ ಸಮಸ್ಯೆ ಅಲ್ಲದೇ, ಶ್ರೀಮಂತರು ಮತ್ತು ಬಡವರ ಮಧ್ಯೆ ಉಂಟಾಗಿರುವ ಆರ್ಥಿಕ ಅಸಮಾನತೆ ಮತ್ತಷ್ಟು ಹದಗೆಟ್ಟಿದೆ. ಈ ಎಲ್ಲಾ ಅಂಶಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.


‘ದೇಶದಲ್ಲಿ ಏಕೆ ಸಮರ್ಪಕವಾಗಿ ಉದ್ಯೋಗಳು ಸೃಷ್ಟಿಯಾಗುತ್ತಿಲ್ಲ, ಇದಕ್ಕೆ ಯಾರು ಹೊಣೆ? ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ಉದ್ಯೋಗಾವಕಾಶಗಳನ್ನು ಕಲ್ಪಿಸುವುದಾಗಿ ಭರವಸೆಗಳನ್ನು ನೀಡುತ್ತದೆ. ಆದರೆ ವಾಸ್ತವವಾಗಿ ಅವರ ಭರವಸೆಗಳು ಪೊಳ್ಳು’ ಎಂದು ಕಿಡಿಕಾರಿದ್ದಾರೆ.

- Advertisement -


‘25 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಕೇವಲ 6,50,000 ಹುದ್ದೆಗಳಿದ್ದು, ಇದು ಸಮುದ್ರದಲ್ಲಿ ಇರುವ ಒಂದು ಹನಿಯಂತೆ ಅಲ್ಲವೇ?’ಎಂದು ಪ್ರಶ್ನಿಸಿದ್ದಾರೆ.



Join Whatsapp