ಶಿಕ್ಷಣ, ಆದಾಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಸ್ಲಿಮರು ಸಮಾನತೆ ಸಾಧಿಸಿದರಷ್ಟೇ ದೇಶದ ಅಭಿವೃದ್ಧಿ ಸಾಧ್ಯ : ಆರ್ಥಿಕ ತಜ್ಞ ಪ್ರೊಫೆಸರ್ ಅಮಿತಾಬ್ ಕುಂಡು

Prasthutha|

- Advertisement -

ಹೊಸ ಶಿಕ್ಷಣ ನೀತಿಯ ಕುರಿತಂತೆ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಲ್ಲಿ ಹೈದರಾಬಾದ್‌ನ ಅಭಿವೃದ್ಧಿ ನೀತಿ ಮತ್ತು ಅಭ್ಯಾಸ ಕೇಂದ್ರದ (ಸಿಡಿಪಿಪಿ) ಸಹಯೋಗದೊಂದಿಗೆ ಶುಕ್ರವಾರ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದ ಕಾರ್ಯಕ್ರಮದ ದುಂಡು ಮೇಜಿನ ಸಭೆಯಲ್ಲಿ ಮುಸ್ಲಿಮರ ಆದಾಯ,ಆರೋಗ್ಯ ಮತ್ತು ಶಿಕ್ಷಣಗಳ ಕುರಿತಂತೆ ಚರ್ಚೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ , ಸಾಚಾರ್ ಕಮಿಟಿಯ ವರದಿಯ ಮೌಲ್ಯಮಾಪನ ಸಮಿತಿಯ ಅಧ್ಯಕ್ಷರಾಗಿದ್ದ ಹಾಗೂ ದೇಶದ ಖ್ಯಾತ ಆರ್ಥಿಕ ತಜ್ಞ ಪ್ರೊಫೆಸರ್. ಅಮಿತಾಬ್ ಕುಂಡು ಅವರು ಮಾತನಾಡುತ್ತಾ, “ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ಮುಸ್ಲಿಮರು ಹಿಂದುಳಿದಿದ್ದಾರೆ. ಭಾರತದ ಅಭಿವೃದ್ಧಿಗೆ ಆದಾಯ, ಆರೋಗ್ಯ ಮತ್ತು ಶಿಕ್ಷಣದಲ್ಲಿನ ಸಮಾನತೆ ಮಾತ್ರ ಪರಿಹಾರವಾಗಬಲ್ಲುದು. ಇದನ್ನು ಇತರೆ ವರ್ಗಗಳೊಂದಿಗೆ ಹೋಲಿಸಿದ್ದಲ್ಲಿ ಅದರ ಪ್ರಮಾಣ ಇನ್ನೂ ಅಸಮಾನತೆಯ ಮಟ್ಟದಲ್ಲಿದೆ” ಎಂದು ಅವರು ಹೇಳಿದರು. ಮುಸ್ಲಿಮರು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಸವಲತ್ತುಗಳನ್ನು ಪಡೆಯುವಲ್ಲಿ ಇನ್ನೂ ಹಿಂದುಳಿದಿದ್ದಾರೆ ಎಂದೂ ಕೂಡಾ ಪ್ರೊಫೆಸರ್ ಕುಂಡು ಒತ್ತಿ ಹೇಳಿದರು.
ಸಭೆಯಲ್ಲಿದ್ದ ಪ್ರೊ. ಎಸ್ ಎಂ ರಹಮತುಲ್ಲಾ ಅವರು, ತರಗತಿಗೆ ಉತ್ತಮವಾಗಿ ಸಿದ್ಧರಾಗಿರಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿ ತಮ್ಮನ್ನು ತಾವು ಯಾವಾಗಲೂ ವಿದ್ಯಾರ್ಥಿಯೆಂದು ಪರಿಗಣಿಸುವ ಮತ್ತು ವಿಷಯದ ಬಗ್ಗೆ ತಮ್ಮನ್ನು ತಾವು ನವೀಕರಿಸಿಕೊಳ್ಳುವವನೇ ಅತ್ಯುತ್ತಮ ಶಿಕ್ಷಕ ಎಂದು ಹೇಳಿದರು. ಅಲ್ಪಸಂಖ್ಯಾತರ ಬಜೆಟ್ ವಿದ್ಯಾರ್ಥಿವೇತನವನ್ನು ನೀಡಲು ಮತ್ತು ಅವರಿಗೆ ಮೂಲಸೌಕರ್ಯಗಳನ್ನು ನಿರ್ಮಿಸಲು ಬಳಸಬೇಕು ಎಂಬ ವಿಷಯದ ಕುರಿತು ಕೂಡಾ ಸಭೆಯಲ್ಲಿ ಚರ್ಚಿಸಲಾಯಿತು.

Join Whatsapp