ಪೂರ್ವ ಇಂಡೋನೇಷ್ಯಾದ ದ್ವೀಪದಲ್ಲಿ ಭೂಕಂಪನ: ಹಲವು ಮನೆಗಳಿಗೆ ಹಾನಿ

Prasthutha|

ಜಕಾರ್ತ: ಪೂರ್ವ ಇಂಡೋನೇಷ್ಯಾದ ಕಡಿಮೆ ಜನಸಂಖ್ಯೆಯ ದ್ವೀಪದಲ್ಲಿ ಪ್ರಬಲ ಆಳ ಸಮುದ್ರ ಭೂಕಂಪನ ಉಂಟಾಗಿದ್ದು, ಹಲವು ಕಟ್ಟಡಗಳಿಗೆ ಹಾನಿಯಾದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

- Advertisement -

ಇದರ ಪರಿಣಾಮ ಉತ್ತರ ಆಸ್ಟ್ರೇಲಿಯಾದಲ್ಲಿಯೂ ಕಂಡುಬಂದಿದ್ದು, ಅಲ್ಲಿಯೂ ಕಂಪನದ ಅನುಭವವಾಗಿದೆ.

ತನಿಂಬಾರ್ ದ್ವೀಪಗಳಲ್ಲಿ ಎರಡು ಶಾಲಾ ಕಟ್ಟಡಗಳು ಮತ್ತು 15 ಮನೆಗಳಿಗೆ ಹಾನಿಯಾಗಿದ್ದು, ಒಂದು ಮನೆಗೆ ಭಾರಿ ಹಾನಿಯಾಗಿದೆ. ಮೂರು ಮನೆಗಳು ಸಾಧಾರಣವಾಗಿ ಹಾನಿಗೀಡಾಗಿವೆ. ಒಬ್ಬ ವ್ಯಕ್ತಿಗೆ ಮಾತ್ರ ಗಾಯಗಳಾದ ಬಗ್ಗೆ ವರದಿಯಾಗಿದೆ.

- Advertisement -

ಸ್ಥಳೀಯ ನಿವಾಸಿಗಳಿಗೆ ಮೂರರಿಂದ ಐದು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನ ಉಂಟಾದಾಗ ಭಯಭೀತರಾದ ನಿವಾಸಿಗಳು ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.

2021 ರ ಅಂಕಿಅಂಶಗಳ ಪ್ರಕಾರ, ಸುಮಾರು 1,27,000 ನಿವಾಸಿಗಳನ್ನು ಹೊಂದಿರುವ ಮಲುಕು ಪ್ರಾಂತ್ಯದ ತನಿಂಬಾರ್ ದ್ವೀಪಗಳಿಗೆ ಹತ್ತಿರವಿರುವ ಬಾಂಡಾ ಸಮುದ್ರದಲ್ಲಿ 7.6 ತೀವ್ರತೆಯ ಭೂಕಂಪದ ಕೇಂದ್ರಬಿಂದುವಿತ್ತು ಎಂದು ತಿಳಿದುಬಂದಿದೆ.

ಪಪುವಾ ಮತ್ತು ಪೂರ್ವ ನುಸಾ ಟೆಂಗರ್ ಪ್ರಾಂತ್ಯಗಳು ಮತ್ತು ಉತ್ತರ ಆಸ್ಟ್ರೇಲಿಯಾದಲ್ಲಿ ಕಂಪನದ ಅನುಭವವಾಗಿದೆ.

ಇಂಡೋನೇಷ್ಯಾದ ಹವಾಮಾನಶಾಸ್ತ್ರ ಸುನಾಮಿ ಎಚ್ಚರಿಕೆಯನ್ನು ನೀಡಿದ್ದು, ಅದನ್ನು ಮೂರು ಗಂಟೆಗಳ ನಂತರ ಹಿಂಪಡೆದಿದೆ.



Join Whatsapp