ಉತ್ತರ ಪ್ರದೇಶ: ಮಹಿಳಾ ಶಿಕ್ಷಕಿಗೆ ಶೂನಿಂದ ಥಳಿಸಿದ ಪ್ರಾಂಶುಪಾಲ

Prasthutha|

ಲಖಿಂಪುರಖೇರಿ: ಪ್ರಾಂಶುಪಾಲರು ಸಾರ್ವಜನಿಕವಾಗಿ ಮಹಿಳಾ ಶಿಕ್ಷಕಿಗೆ ಶೂನಿಂದ ಥಳಿಸಿರುವ ಘಟನೆ ಲಖಿಂಪುರ ಬ್ಲಾಕ್ ನ ಮಹಾಂಗುಖೇಡಾ ಶಾಲೆಯಲ್ಲಿ ನಡೆದಿದೆ.

- Advertisement -


ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಲ್ಲೆ ಮಾಡಿದ ಪ್ರಾಂಶುಪಾಲರನ್ನು ಅಜಿತ್ ವರ್ಮಾ ಎಂದು ಗುರುತಿಸಲಾಗಿದೆ. ವರ್ಮಾ ಹಾಗೂ ಶಿಕ್ಷಕಿ ಸೀಮಾದೇವಿ ನಡುವೆ ಬಹಳ ದಿನಗಳಿಂದ ಜಟಾಪಟಿ ನಡೆಯುತ್ತಿತ್ತು ಎನ್ನಲಾಗಿದೆ.


ಶಿಕ್ಷಕಿಯನ್ನು ಈ ರೀತಿ ಥಳಿಸಿದ್ದರಿಂದ ಶಿಕ್ಷಾಮಿತ್ರ ಸಂಘಟನೆ ಸಿಟ್ಟಿಗೆದ್ದಿದ್ದು, ಕ್ರಮ ಜರುಗಿಸುವಂತೆ ಒತ್ತಾಯಿಸಿದೆ. ಘಟನೆ ಸಂಬಂಧ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಾಂಶುಪಾಲರನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ.

Join Whatsapp