ಡಿಸಿಎಂ ಶಿವಕುಮಾರ್ ಬೆಂಗಳೂರು ರೌಂಡ್ಸ್: ರಾಜಕಾಲುವೆ, ಚರಂಡಿ, ಕೆರೆ ಪರಿಶೀಲನೆ

Prasthutha|

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರು ಕೂಡ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಮುಂಗಾರು ಆರಂಭ ಹಿನ್ನೆಲೆ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಕಾರ್ಯ ಹಮ್ಮಿಕೊಂಡರು.

- Advertisement -

ಯಮಲೂರು, ದೊಮ್ಮಲೂರು, ಬೆಳ್ಳಂದೂರು, ಸರ್ಜಾಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಬಿಡಿಎ ಕೇಂದ್ರ ಕಚೇರಿಯಿಂದ ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿ ಬಿಎಂಟಿಸಿ ವೋಲ್ವೋ ಬಸ್ನಲ್ಲಿ ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, HAL ಏರ್ಪೋರ್ಟ್ ರಸ್ತೆ, ಮಣಿಪಾಲ್ ಆಸ್ಪತ್ರೆ ಬಳಿ ಸಂಚರಿಸುತ್ತಿದ್ದಾರೆ ರಾಜಕಾಲುವೆ ಒತ್ತುವರಿಯಾದ ಸ್ಥಳಗಳಿಗೆ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ.ಯಮಲೂರಿನ ಮುಖ್ಯ ಚರಂಡಿ ಸಂಪರ್ಕಗಳನ್ನು ತಪಾಸಣೆ ನಡೆಸಿ ಮುಂಗಾರಿಗೆ ಮೊದಲೇ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

Join Whatsapp