ದತ್ತ ಜಯಂತಿ ಹಿನ್ನಲೆ| ಕೊಟ್ಟಿಗೆಹಾರ,ಬಣಕಲ್ ಸಂಪೂರ್ಣ ಬಂದ್ ಯಶಸ್ವಿ

Prasthutha|

ಕೊಟ್ಟಿಗೆಹಾರ: ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ದತ್ತ ಜಯಂತಿ ಹಿನ್ನಲೆಯಲ್ಲಿ ಗುರುವಾರ ಕೊಟ್ಟಿಗೆಹಾರ, ಬಣಕಲ್ ಸೇರಿದಂತೆ ಮುಖ್ಯ ರಸ್ತೆಯ ಬಗ್ಗಸಗೋಡು,ಚಕ್ಕಮಕ್ಕಿ,ಸಬ್ಬೇನಹಳ್ಳಿ, ಹೊರಟ್ಟಿ ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಬಂದ್ ಆಗಿದ್ದವು.ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ.

- Advertisement -

ಮೆಡಿಕಲ್ , ಪೆಟ್ರೋಲ್ ಬಂಕ್, ಪತ್ರಿಕೆಗಳು,ಹಾಲು ಸರಬರಾಜು ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ಬಂದ್ ಆಗಿ ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ಸಂಪೂರ್ಣ ಬಂದ್ ಯಶಸ್ವಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಿಂದ 182 ವಾಹನಗಳು ಸಾಗಿದ್ಧು 1833 ಭಕ್ತರು ದತ್ತ ಪೀಠಕ್ಕೆ ತೆರಳಿದ್ದಾರೆ. ಬಾಳೂರು ಚೆಕ್ ಪೋಸ್ಟ್ ನಲ್ಲಿ 34 ವಾಹನಗಳು ದತ್ತ ಪೀಠಕ್ಕೆ ಸಾಗಿವೆ. ದತ್ತ ಪೀಠಕ್ಕೆ ಸಾಗಿದ ಎಲ್ಲಾ ವಾಹನಗಳ ಮಾಹಿತಿ ಕಲೆ ಹಾಕಿ ಬಿಡಲಾಗಿದೆ ಎಂದು ರಾಯಚೂರು ಶಕ್ತಿನಗರದ ಸಬ್ ಇನ್ ಸ್ಪೆಕ್ಟರ್ ಬಸವರಾಜ್ ಮಾಹಿತಿ ನೀಡಿದರು. ಸ್ಥಳಕ್ಕೆ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮೇಗೌಡ, ಬಣಕಲ್ ಸಬ್ ಇನ್ ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಎಎಸೈ ಟಿ.ಕೆ.ಶಶಿ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ಮೀಸಲು ಪಡೆಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದರು. ಸಂಜೆವರೆಗೆ ಯಾವುದೇ ಅಹಿತಕರ ಘಟನೆಯಾದ ಬಗ್ಗೆ ವರದಿಯಾಗಿಲ್ಲ.

Join Whatsapp