ದಸರಾ ಮಹೋತ್ಸವದ ಗಜಪಡೆ ಪಯಣಕ್ಕೆ ಚಾಲನೆ: ಸೆ.16 ರಂದು ಅರಮನೆ ಪ್ರವೇಶ

Prasthutha|

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ಮುಂದಾಗಿದ್ದು, ಇಂದು ಗಜಪಡೆ ಪಯಣಕ್ಕೆ ಚಾಲನೆ ದೊರೆತಿದೆ.


ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಯಣ ಆರಂಭಗೊಂಡಿದೆ. ಸಂಸದ ಪ್ರತಾಪ ಸಿಂಹ ಅವರು ಗಜಪಡೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಜಂಬೂಸವಾರಿ ಮೆರವಣಿಗೆ ಮುಂದಾಳತ್ವ ವಹಿಸಲಿರುವ 56 ವರ್ಷದ ಅಭಿಮನ್ಯು ನೇತೃತ್ವದ 8 ಆನೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿವೆ.

- Advertisement -


ಇಂದು ಸಂಜೆ ಲಾರಿ ಮೂಲಕ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಗಜಪಡೆ ಆಗಮಿಸಿದ್ದು, ಸೆಪ್ಪಂಬರ್ 16 ರಂದು ಅರಮನೆಗೆ ಗಜಪಡೆ ಪ್ರವೇಶವಾಗಲಿವೆ. ಈ ವೇಳೆ ಜಿಲ್ಲಾಡಳಿತ ವತಿಯಿಂದ ಗಜಪಡೆಗೆ ಸಾಂಪ್ರದಾಯಕ ಪೂಜೆ ಸಲ್ಲಿಸಿ, ಸ್ವಾಗತಿಸಲಾಗುತ್ತದೆ. ಈ ಬಾರಿ ದಸರಾ ಮಹೋತ್ಸವ ಅಕ್ಟೋಬರ್ 7ರಿಂದ 15ರವರೆಗೆ ನಡೆಯಲಿದೆ.

- Advertisement -