ಡಿವೋರ್ಸ್ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

Prasthutha|

ಬೆಂಗಳೂರು: ವಿಚ್ಛೇದನಾ ಕೋರಿ ನಟ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

- Advertisement -


ತಮ್ಮ ಮೊದಲನೇ ಪತ್ನಿ ನಾಗರತ್ನ ಬಳಿ ವಿಚ್ಛೇದನಾ ಕೋರಿ 2018 ರಲ್ಲಿ ನಟ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಇಂದು 2ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.

ನಾಗರತ್ನ ಮತ್ತು ದುನಿಯಾ ವಿಜಯ್ ಅವರ ಸಂಸಾರದಲ್ಲಿ ಹಲವು ವರ್ಷಗಳ ಹಿಂದೆಯೇ ಬಿರುಕು ಮೂಡಿತ್ತು. ಆದ್ದರಿಂದ 2018ರಲ್ಲಿ ವಿಜಯ್ ಅವರು ಡಿವೋರ್ಸ್​ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರು ಸಿದ್ಧರಿದ್ದಾರೆ. ಅಲ್ಲದೇ, ಪತ್ನಿಗೆ ಜೀವನಾಂಶ ನೀಡಲು ಕೂಡ ಅವರು ಒಪ್ಪಿದ್ದಾರೆ. ಆದರೆ, ಪ್ರತಿ ಬಾರಿ ಕೋರ್ಟ್​ನಲ್ಲಿ ವಿಚಾರಣೆ ನಡೆದಾಗ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಕೊಳ್ಳಲಿಲ್ಲ. ಆದ್ದರಿಂದ ಪ್ರಕರಣ ಈತನ ಮುಂದೂಡಿಕೊಂಡು ಬಂದಿತ್ತು.

Join Whatsapp