ದುಲೀಪ್‌ ಟ್ರೋಫಿ| ಸಿಕ್ಸರ್ ಬಾರಿಸಿದ್ದಕ್ಕೆ ಸಿಟ್ಟು | ವೆಂಕಟೇಶ್ ಅಯ್ಯರ್ ತಲೆಗೆ ಚೆಂಡು ಎಸೆದ ಬೌಲರ್ !

Prasthutha|

ಕೊಯಮತ್ತೂರು: ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯ ತಂಡ, ಕೇಂದ್ರ ವಲಯ ವಿರುದ್ಧ ಇನಿಂಗ್ಸ್‌ ಮುನ್ನಡೆ ಪಡೆದಿದೆ.
ಶುಕ್ರವಾರದ ಆಟದ ಅಂತ್ಯಕ್ಕೆ ಪಶ್ಚಿಮ ವಲಯ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 130 ರನ್‌ ಗಳಿಸಿದ್ದು, ಒಟ್ಟು 259 ರನ್‌ಗಳ ಮುನ್ನಡೆಯಲ್ಲಿದೆ.

- Advertisement -

ಈ ನಡುವೆ ತಾನು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದ ದಕ್ಷಿಣ ವಲಯದ ವೆಂಕಟೇಶ್ ಅಯ್ಯರ್ ವಿರುದ್ಧ ಸಿಟ್ಟಿಗೆದ್ದ ಪಶ್ಚಿಮ ವಲಯ ತಂಡದ ಮದ್ಯಮ ವೇಗದ ಬೌಲರ್ ಚಿಂತನ್ ಗಜ, ಅಯ್ಯರ್ ಮೇಲೆ ಚೆಂಡನ್ನು ಎಸೆದಿದ್ದು, ಇದರಿಂದ ಗಾಯಗೊಂಡ ಅಯ್ಯರ್ ಕುಸಿದು ಬಿದ್ದರು.

ಮೊದಲ ಎಸೆತವನ್ನು ಸಿಕ್ಸರ್ ಬಾರಿಸಿ, ಮರು ಎಸೆತವನ್ನು ಅಯ್ಯರ್ ರಕ್ಷಣಾತ್ಮಕವಾಗಿ ಆಡಿದ್ದರು. ಆದರೆ ಮೊದಲೇ ಸಿಟ್ಟಿನಲ್ಲಿದ್ದ ಚಿಂತನ್, ನೇರವಾಗಿ ತನ್ನತ್ತ ಬಂದ ಚೆಂಡನ್ನು ಮತ್ತೆ ಅಯ್ಯರ್‌ ಅವರತ್ತ ಬಲವಾಗಿ ಎಸೆದಿದ್ದಾರೆ. ಕ್ರೀಸ್‌ನಲ್ಲಿದ್ದ ಅಯ್ಯರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಚೆಂಡು ತಲೆಗೆ ಬಡಿದ ಕಾರಣ ತೀವ್ರವಾಗಿ ಗಾಯಗೊಂಡ ನೆಲಕ್ಕೆ ಕುಸಿದು ಬಿದ್ದರು. ಕೂಡಲೇ ಆಂಬುಲೆನ್ಸ್ ಮೂಲಕ ಅವರನ್ನು ಕರೆದುಕೊಂಡು ಹೋದ ವೈದ್ಯಕೀಯ ತಂಡ, ತಪಾಸಣೆ ನಡೆಸಿ ಚಿಕಿತ್ಸೆ ನೀಡಿತ್ತು.

- Advertisement -

ಬಳಿಕ ಚೇತರಿಸಿಕೊಂಡು ಮತ್ತೆ ಬ್ಯಾಟಿಂಗ್ ಇಳಿದರೂ ಸಹ, ಕೇವಲ 14 ರನ್ ಗಳಿಸಲಷ್ಟೇ ಅವರಿಗೆ ಸಾಧ್ಯವಾಯಿತು. ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದ ಕಾರಣ, ನಂತರದಲ್ಲಿ ಕ್ಷೇತ್ರರಕ್ಷಣೆ ವೇಳೆ ಅಯ್ಯರ್ ಮೈದಾನಕ್ಕೆ ಇಳಿಯಲಿಲ್ಲ.

ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ನಡೆದ ಈ ಘಟನೆ ಇದೀಗ ಭಾರಿ ಚರ್ಚೆಗೆ ಒಳಗಾಗಿದೆ.

2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದರ್ಪಾಣೆ ಮಾಡಿದ್ದ ಅಯ್ಯರ್, ಟೀಂ ಇಂಡಿಯಾ ಪರ ಎರಡು ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ.



Join Whatsapp