ಕೇರಳದಲ್ಲಿ ನಿಫಾ ಸೋಂಕು ಪ್ರಕರಣ ಏರಿಕೆ | ದ.ಕ.ಜಿಲ್ಲೆ ಹೈ ಅಲರ್ಟ್

Prasthutha|

ಮಂಗಳೂರು : ಕೇರಳದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ನಡುವೆ ಇದೀಗ ಮತ್ತೆ ನಿಫಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗದಲ್ಲಿರುವ ದ.ಕ. ಜಿಲ್ಲೆಯಲ್ಲಿ ಈ ಬಗ್ಗೆ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳದ ಕೊಯಿಕ್ಕೋಡ್‌ನಲ್ಲಿ 12 ವರ್ಷದ ಬಾಲಕ ನಿಫಾ ಸೋಂಕಿನಿಂದಾಗಿ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲೂ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

- Advertisement -

ಮಂಗಳೂರಿಗೆ ಕೇರಳದಿಂದ ಸಾಕಷ್ಟು ಮಂದಿ ಆರೋಗ್ಯ, ಶಿಕ್ಷಣ ಮತ್ತು ಆರೋಗ್ಯ ಸಂಬಂಧ ಆಗಮಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಾಬೂನು ನೀರಿನಿಂದ ಪದೇಪದೇ ಕೈ ತೊಳೆಯುವುದು, ಸೋಂಕು ಹರಡುವ ಪ್ರಾಣಿಗಳಾದ ಬಾವಲಿ, ಹಂದಿಗಳಿಂದ ದೂರ ಇರುವುದು, ಪ್ರಾಣಿಪಕ್ಷಿಗಳು ತಿಂದು ಬಿಟ್ಟಿರುವಂತಹ ಹಣ್ಣು-ಹಂಪಲನ್ನು ಸೇವಿಸದೇ ಇರುವುದು, ಸೋಂಕಿತ ವ್ಯಕ್ತಿಯ ದೇಹ ದ್ರವಗಳಿಂದ ರೋಗ ಹರಡುವ ಸಂಭವ ಇರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ನಿಫಾ ಶಂಕಿತ ಪ್ರದೇಶಗಳಿಂದ ಬರುವ ಜ್ವರದ ಪ್ರಕರಣಗಳನ್ನು ಮತ್ತು ಅವರನ್ನು ಪ್ರತ್ಯೇಕಿಸುವುದು, ಸಂಶಯಿತ ಪ್ರಕರಣ ಕಂಡು ಬಂದ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದ್ದಾರೆ.



Join Whatsapp