107 ಕೋಟಿ ರೂ. ವಂಚಿಸಿದ ಕಾಸರಗೋಡಿನ ಅಳಿಯ: ದೂರು ನೀಡಿದ ದುಬೈ ಉದ್ಯಮಿ

Prasthutha|

ಕೊಚ್ಚಿ: ತನ್ನ ಮಗಳ ಗಂಡ ಕಾಸರಗೋಡು ನಿವಾಸಿ 107 ಕೋಟಿ ರೂ. ಪಡೆದು ವಂಚಿಸಿರುವುದಾಗಿ ದುಬೈಯ ಉದ್ಯಮಿಯೊಬ್ಬರು ದೂರು ನೀಡಿದ್ದಾರೆ.

- Advertisement -

 ದುಬೈನಲ್ಲಿ ನೆಲೆಸಿರುವ ಅಬ್ದುಲ್‌ ಲಾಹಿರ್‌ ಹಸನ್‌ ಎಂಬುವವರು ಅಳಿಯ ಮೋಸ ಮಾಡಿರುವ ಬಗ್ಗೆ ದೂರು ನೀಡಿರುವ ಉದ್ಯಮಿ.   

“2017ರಲ್ಲಿ ನನ್ನ ಮಗಳ ಜೊತೆ ಮದುವೆ ಮಾಡಿಕೊಂಡಿದ್ದ ಕಾಸರಗೋಡಿನ ಮುಹಮ್ಮದ್‌ ಹಫೀಜ್, ಹಲವು ಆಸ್ತಿಗಳನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. ಮಗಳಿಗೆ ಉಡುಗೊರೆಯಾಗಿ ನೀಡಿದ್ದ ಚಿನ್ನಾಭರಣಗಳನ್ನೂ ಪಡೆದುಕೊಂಡಿದ್ದಾನೆ’ ಎಂದು ಹಸನ್‌ ಅವರು ಆಲುವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

- Advertisement -

‘ವಂಚನೆ ಪ್ರಕರಣದಲ್ಲಿ ಹಸನ್‌ ಅವರ ಅಳಿಯನ ಜೊತೆ ಬೇರೆಯವರೂ ಶಾಮೀಲಾಗಿರುವ ಸಾಧ್ಯತೆ ಇದೆ’ ಎಂದು ಪೊಲೀಸ್‌ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Join Whatsapp