ದುಬೈ: ಇನ್ ಸ್ಟಾಗ್ರಾಂ ಮೂಲಕ ಪತಿಗೆ ವಿಚ್ಛೇದನ ನೀಡಿದ್ದ ದುಬೈ ರಾಜಕುಮಾರಿ ಶೈಖಾ ಮೆಹ್ರಾ ಅಲ್ ಮುಕ್ತಮ್ ಅವರು ಮೆಹ್ರಾ ಎಂ1 ಬ್ರ್ಯಾಂಡ್ ನ ಅಡಿಯಲ್ಲಿ ‘ಡಿವೋರ್ಸ್’ ಹೆಸರಿನ ‘ಪರ್ಫ್ಯೂಮ್’ ಅನ್ನು ಬಿಡುಗಡೆ ಮಾಡುವುದಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ‘ಡಿವೋರ್ಸ್’ ಎಂದು ಬರೆದಿರುವ ಕಪ್ಪು ಬಾಟಲಿಯ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಮೆಹ್ರಾ ಅವರು, ಕೆಲವು ದಿನಗಳ ಹಿಂದೆ ವಿಡಿಯೊವೊಂದನ್ನು ಹಂಚಿಕೊಂಡಿದ್ದರು.
ಮೆಹ್ರಾ ಅವರ ಪೋಸ್ಟ್ ಗೆ ಹಲವರು ಕಾಮೆಂಟ್ ಮಾಡಿದ್ದು, ‘ತುಂಬಾ ವಿಭಿನ್ನವಾಗಿದೆ’ ಎಂದಿದ್ದಾರೆ.
ಕೆಲವು ತಿಂಗಳ ಹಿಂದೆ ಮೆಹ್ರಾ ಅವರು ಇನ್‌ಸ್ಟಾಗ್ರಾನಲ್ಲಿಯೇ ಪತಿ ಶೇಖ್ ಮನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮುಕ್ತಮ್ ಅವರಿಗೆ ವಿಚ್ಛೇದನ ನೀಡಿದ್ದರು.